ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಪೆರುಂಬಳ ಜಿ.ಎಲ್.ಪಿ ಶಾಲೆಯಲ್ಲಿ ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆ ಆಯೋಜಿಸಲಾಯಿತು.
ಸುಮಾರು 60 ಮಂದಿ ಮಕ್ಕಳು ಭಾಗವಹಿಸಿದ ಸ್ಪರ್ಧೆಯಲ್ಲಿ ಸಬ್ ಜ್ಯುನಿಯರ್ ವಿಭಾಗದಲ್ಲಿ ಕಿರಣ್ ಮಹೇಶ್ ಪ್ರಥಮ, ಸಿಹಾನ್ ಹಾಗೂ ಆದೀಕ್ಷ ಇಬ್ಬರು ದ್ವಿತೀಯ ಬಹುಮಾನ ಪಡೆದರು. ಜ್ಯೂನಿಯರ್ ವಿಭಾಗದಲ್ಲಿ ಸಾದ್ವಿಕ್ ಪ್ರಥಮ, ಶಿವಪ್ರಿಯ ದ್ವಿತೀಯ ಹಾಗೂ ಅಕ್ಷಯಶ್ರೀ ಪೆÇ್ರೀತ್ಸಾಹಕ ಬಹುಮಾನ ಪಡೆದರು.
ಘಟಕದ ಅಧ್ಯಕ್ಷ ವಸಂತ ಕೆರಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ವಿನಿತಾ , ಪಿ.ಟಿ.ಎ. ಅಧ್ಯಕ್ಷ ಮುಹಮ್ಮದ್ ರಿಯಾಸ್, ಸ್ಪರ್ಧೆಯ ತೀರ್ಪುಗಾರ ಹಾಗೂ ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ಎಕೆಪಿಎ ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಮನು ಎಲ್ಲೋರ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ವಿಜೇತರಿಗೆ ಬಹುಮಾನ ವಿತರಿಸಿದರು.
ಘಟಕ ಉಪಾಧ್ಯಕ್ಷ ಅಭಿಷೇಕ್ ಸಿ, ಸಮಿತಿ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿದರು. ಶಿಕ್ಷಿ ದೇವ್ ವಂದಿಸಿದರು.


