ತೆರಿಗೆ ವಿನಾಯಿತಿಗಳು, ಉದ್ಯೋಗ ಸೃಷ್ಟಿ, ಅಭಿವೃದ್ಧಿ ಯೋಜನೆಗಳು ಮತ್ತು ಆರ್ಥಿಕ ಸುಧಾರಣೆಗಳ ಕುರಿತು ಚರ್ಚೆಗಳು ಜೋರಾಗಿವೆ. ಈ ಸಂದರ್ಭದಲ್ಲಿ, ಸ್ವಲ್ಪ ಇತಿಹಾಸದತ್ತ ಮುಖ ಮಾಡೋಣ ಸ್ವತಂತ್ರ ಭಾರತದ ಮೊದಲ ಬಜೆಟ್ ಯಾವಾಗ ಮಂಡಿಸಲಾಯಿತು? ಅದು ಎಷ್ಟು ಮೊತ್ತದ್ದಾಗಿತ್ತು?
ಬಜೆಟ್ ಎಂದರೇನು?
ಭಾರತೀಯ ಸಂವಿಧಾನದ 112ನೇ ವಿಧಿಯ ಪ್ರಕಾರ, ಕೇಂದ್ರ ಬಜೆಟ್ ಎಂದರೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚವನ್ನು ಒಳಗೊಂಡ ಹಣಕಾಸು ಹೇಳಿಕೆ. ಕೇಂದ್ರ ಬಜೆಟ್ ಅನ್ನು ಪ್ರತಿವರ್ಷ ಏಪ್ರಿಲ್ 1 ರಿಂದ ಮಾರ್ಚ್ 31ರವರೆಗೆ ಜಾರಿಯಾಗುವಂತೆ ತಯಾರಿಸಲಾಗುತ್ತದೆ. ಇದನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಅವು ಯಾವವು ಎಂದರೆ?
1. ಕಂದಾಯ ಬಜೆಟ್ (ಆದಾಯ ಮತ್ತು ದಿನನಿತ್ಯದ ವೆಚ್ಚಗಳು)
2. ಬಂಡವಾಳ ಬಜೆಟ್ (ಮೂಲಸೌಕರ್ಯ, ಹೂಡಿಕೆ, ಸಾಲಗಳು)
ಭಾರತದ ಮೊದಲ ಬಜೆಟ್ ಯಾವಾಗ?
ಭಾರತದ ಮೊದಲ ಬಜೆಟ್ ಅನ್ನು ಬ್ರಿಟಿಷ್ ಆಡಳಿತದ ಕಾಲದಲ್ಲಿ 1860ರ ಏಪ್ರಿಲ್ 7ರಂದು ಅಂದಿನ ಹಣಕಾಸು ಸಚಿವ ಜೇಮ್ಸ್ ವಿಲ್ಸನ್ ಮಂಡಿಸಿದರು. ಆದರೆ ಇದು ವಸಾಹತು ಆಡಳಿತದ ಬಜೆಟ್ ಆಗಿತ್ತು. ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26ರಂದು ಮಂಡಿಸಲಾಯಿತು. ಇದನ್ನು ದೇಶದ ಮೊದಲ ಹಣಕಾಸು ಸಚಿವರಾದ ಸರ್ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು. ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರದ ಗಂಭೀರ ಪರಿಸ್ಥಿತಿಯಲ್ಲಿ, ವ್ಯಾಪಕ ಗಲಭೆಗಳು, ನಿರಾಶ್ರಿತರ ಸಮಸ್ಯೆ ಮತ್ತು ಆರ್ಥಿಕ ಅಸ್ಥಿರತೆಯ ನಡುವೆ ಈ ಬಜೆಟ್ ಮಂಡನೆಯಾಗಿತ್ತು ಎಂಬುದು ಇತಿಹಾಸದ ಮಹತ್ವದ ಅಂಶ.
ಏಳು ತಿಂಗಳ ಅವಧಿಗೆ ಮಾತ್ರ ಇತ್ತು!
ಈ ಮೊದಲ ಬಜೆಟ್ ಕೇವಲ ಏಳು ತಿಂಗಳ ಅವಧಿಗೆ (1947ರ ನವೆಂಬರ್‌ನಿಂದ 1948ರ ಮಾರ್ಚ್ ವರೆಗೆ) ಮಾತ್ರ ಇತ್ತು. ನಂತರ ಏಪ್ರಿಲ್ 1, 1948ರಿಂದ ಹೊಸ ಬಜೆಟ್ ಜಾರಿಗೆ ಬರಬೇಕಾಗಿತ್ತು. ವಿಶೇಷವೆಂದರೆ, 1948ರ ಸೆಪ್ಟೆಂಬರ್ ವರೆಗೆ ಭಾರತ ಮತ್ತು ಪಾಕಿಸ್ತಾನ ಒಂದೇ ಕರೆನ್ಸಿಯನ್ನು ಬಳಸುತ್ತವೆ ಎಂದು ಈ ಬಜೆಟ್‌ನಲ್ಲಿ ನಿರ್ಧರಿಸಲಾಗಿತ್ತು.
ನಂತರದ ಬೆಳವಣಿಗೆಗಳು!
ಸರ್ ಆರ್.ಕೆ. ಷಣ್ಮುಖಂ ಚೆಟ್ಟಿ ನಂತರ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ನಂತರ ಜಾನ್ ಮಥಾಯ್ ಹಣಕಾಸು ಸಚಿವರಾಗಿ 1949-50 ಮತ್ತು 1950-51ರ ಬಜೆಟ್‌ಗಳನ್ನು ಮಂಡಿಸಿದರು. 1949-50ರ ಬಜೆಟ್ ವಿಶೇಷವಾಗಿದ್ದು, ಎಲ್ಲಾ ರಾಜಪ್ರಭುತ್ವ ರಾಜ್ಯಗಳನ್ನು ಒಳಗೊಂಡ ಏಕೀಕೃತ ಭಾರತದ ಮೊದಲ ಬಜೆಟ್ ಆಗಿತ್ತು.
ಮೊದಲ ಬಜೆಟ್‌ನ ಅಂಕಿಅಂಶಗಳು!
ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಅಂಕಿಅಂಶಗಳು ಇಂದಿನ ಬಜೆಟ್ ಗಾತ್ರದೊಂದಿಗೆ ಹೋಲಿಸಿದರೆ ಅಚ್ಚರಿ ಮೂಡಿಸುತ್ತವೆ.
ಅಂದರೆ, ಒಟ್ಟು ವೆಚ್ಚದ ಸುಮಾರು 46-50 ಶೇಕಡಾ ಹಣವನ್ನು ರಕ್ಷಣೆಗೆ ಮೀಸಲಿಡಲಾಗಿತ್ತು. ವಿಭಜನೆಯ ನಂತರದ ಅಸ್ಥಿರತೆ ಮತ್ತು ಭದ್ರತಾ ಸವಾಲುಗಳು ಇದಕ್ಕೆ ಕಾರಣವಾಗಿದ್ದವು.
ಇಂದಿನ ಬಜೆಟ್‌ಗೆ ಹೋಲಿಕೆ!
ಇಂದು ಲಕ್ಷಾಂತರ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗುತ್ತಿದೆ. ಆದರೆ ಕೇವಲ ₹171 ಕೋಟಿ ಆದಾಯದಿಂದ ಆರಂಭವಾದ ಭಾರತದ ಆರ್ಥಿಕ ಪಯಣ, ಇಂದು ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ನಿಲ್ಲುವವರೆಗೂ ಬೆಳೆದಿದೆ. ಇದು ದೇಶದ ಆರ್ಥಿಕ ಪ್ರಗತಿಯ ಸ್ಪಷ್ಟ ಸಾಕ್ಷಿಯಾಗಿದೆ.

- ಒಟ್ಟು ಆದಾಯ: ₹171.15 ಕೋಟಿ
- ಒಟ್ಟು ವೆಚ್ಚ: ₹197.29 ಕೋಟಿ (ಕೆಲವೆಡೆ ₹197.39 ಕೋಟಿ ಎಂದು ಉಲ್ಲೇಖ)
- ಹಣಕಾಸಿನ ಕೊರತೆ: ₹24.59 ಕೋಟಿ
- ರಕ್ಷಣಾ ವೆಚ್ಚ': ₹92.74 ಕೋಟಿ