HEALTH TIPS

ಹದಿಹರೆಯದ ಪ್ರೀತಿಯ ರಕ್ಷಣೆಗೆ ರೋಮಿಯೋ-ಜೂಲಿಯೆಟ್ ಷರತ್ತು ಪರಿಹಾರವೇ? ಸುಪ್ರೀಂ ಕೊಟ್ಟ ಸಂದೇಶವೇನು?

ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ದುರುಪಯೋಗದ ಕುರಿತು ಸುಪ್ರೀಂ ಕೋರ್ಟ್ (Supreme Court) ಗಂಭೀರ ಕಳವಳ ವ್ಯಕ್ತಪಡಿಸಿದೆ. ಹದಿಹರೆಯದವರ ನಡುವಿನ ತಿಳಿಯದೆಯೇ ಅಥವಾ ಒಮ್ಮತದ ಸಂಬಂಧಗಳನ್ನು ಕಠಿಣ ಕ್ರಿಮಿನಲ್ (Criminal) ಕಾನೂನಿನಡಿ ಅಪರಾಧವಾಗಿ ಪರಿಗಣಿಸುವುದು ಅನ್ಯಾಯಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಈ ಸಮಸ್ಯೆಗೆ ಪರಿಹಾರವಾಗಿ ರೋಮಿಯೋ-ಜೂಲಿಯೆಟ್ (Romeo- Juliet) ಷರತ್ತು ಪರಿಚಯಿಸುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.
ಸುಪ್ರೀಂ ನೀಡಿದ ಸಂದೇಶವೇನು?
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠ, POCSOದಂತಹ ಕಠಿಣ ಕಾನೂನುಗಳ ವ್ಯಾಪಕ ದುರುಪಯೋಗವನ್ನು ತಡೆಯಲು ತಕ್ಷಣದ ನೀತಿ ಹಸ್ತಕ್ಷೇಪ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ. ಕಾನೂನು ಮಕ್ಕಳ ರಕ್ಷಣೆಗೆ ಇರುವುದೇ ಹೊರತು, ನಿಜವಾದ ಹದಿಹರೆಯದ ಸಂಬಂಧಗಳನ್ನು ಶಿಕ್ಷಿಸಲು ಅಲ್ಲ ಎಂಬ ಅರ್ಥಪೂರ್ಣ ಸಂದೇಶವನ್ನು ನ್ಯಾಯಾಲಯ ನೀಡಿದೆ.

ಪ್ರಕರಣದ ಹಿನ್ನೆಲೆ!
ಈ ವಿಷಯ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು, ಉತ್ತರ ಪ್ರದೇಶ ಸರ್ಕಾರವು ಸಲ್ಲಿಸಿದ ಅರ್ಜಿಯ ಮೂಲಕ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಆದೇಶದಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದರೂ, ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಲು ನಿರಾಕರಿಸಿತು.

POCSO ಕಾಯ್ದೆಯ ಅನುಷ್ಠಾನದಲ್ಲಿಉಂಟಾದ ಸಮಸ್ಯೆಯತ್ತ ಸುಪ್ರೀಂ ಗಮನ!
ಈ ಮೇಲ್ಕಾಣಿಸಿದ ಪ್ರಕರಣದ ಮೂಲಕ POCSO ಕಾಯ್ದೆಯ ಅನುಷ್ಠಾನದಲ್ಲಿ ಉಂಟಾಗುತ್ತಿರುವ ದೊಡ್ಡ ಸಮಸ್ಯೆಯತ್ತ ನ್ಯಾಯಾಲಯದ ಗಮನ ಹರಿದಿದೆ. ಅಂದರೆ, ಕುಟುಂಬಗಳ ಅಸಮ್ಮತಿಯ ಕಾರಣಕ್ಕೆ ಒಮ್ಮತದ ಹದಿಹರೆಯದ ಸಂಬಂಧಗಳನ್ನು ಅಪರಾಧೀಕರಣಗೊಳಿಸುವ ಪ್ರವೃತ್ತಿ ಆಗಿದೆ ಇದರಿಂದ ಇದಕ್ಕೆ ಈ ನೀತಿ ಹಸ್ತಕ್ಷೇಪವನ್ನು ಅಗತ್ಯವೆಂದು ಹೇಳಿದೆ .

ದುರುಪಯೋಗದ ಕುರಿತು ಕೋರ್ಟ್ ಕಳವಳ!
POCSO ಕಾಯ್ದೆಯ ದುರುಪಯೋಗದ ಬಗ್ಗೆ ಪದೇಪದೇ ನ್ಯಾಯಾಲಯಗಳ ಗಮನಕ್ಕೆ ಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ, ತನ್ನ ಆದೇಶದ ಪ್ರತಿಯನ್ನು *ಭಾರತ ಸರ್ಕಾರದ ಕಾನೂನು ಕಾರ್ಯದರ್ಶಿಗೆ ಕಳುಹಿಸಬೇಕು* ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಸಮಸ್ಯೆಯನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದೆ.

ನ್ಯಾಯಾಲಯದ ಪ್ರಕಾರ, ಈ ಕ್ರಮಗಳಲ್ಲಿ ಎರಡು ಅಂಶಗಳು ಮುಖ್ಯವಾಗಿರಬೇಕು;

  • ನಿಜವಾದ ಹದಿಹರೆಯದ ಒಮ್ಮತದ ಸಂಬಂಧಗಳನ್ನು POCSO ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡುವ ವ್ಯವಸ್ಥೆ.

  • POCSO ಕಾಯ್ದೆಯನ್ನು ದುರುಪಯೋಗಪಡಿಸಿ ಸೇಡು ತೀರಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸ್ಪಷ್ಟ ವ್ಯವಸ್ಥೆ.


ರೋಮಿಯೋ-ಜೂಲಿಯೆಟ್ ಷರತ್ತು ಎಂದರೇನು?
ರೋಮಿಯೋ-ಜೂಲಿಯೆಟ್ ಷರತ್ತು ಎಂಬುದು ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನು ತತ್ವ. ಇದರ ಉದ್ದೇಶ, ಸಣ್ಣ ವಯಸ್ಸಿನ ವ್ಯತ್ಯಾಸವಿರುವ ಹದಿಹರೆಯದವರ ನಡುವಿನ ಒಮ್ಮತದ ಸಂಬಂಧಗಳನ್ನು ಕ್ರಿಮಿನಲ್ ಅಪರಾಧಗಳಿಂದ ರಕ್ಷಿಸುವುದು. ಭಾರತದಲ್ಲಿ POCSO ಕಾಯ್ದೆಯ ಅಡಿಯಲ್ಲಿ ಒಪ್ಪಿಗೆಯನ್ನು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಇಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದರೂ ಅಥವಾ ಸಂಬಂಧ ಸಂಪೂರ್ಣ ಒಮ್ಮತದಿದ್ದರೂ, ಹುಡುಗನ ವಿರುದ್ಧ ಗಂಭೀರ ಅಪರಾಧ ಪ್ರಕರಣ ದಾಖಲಾಗುತ್ತದೆ. ಇದರಿಂದ ಅವನಿಗೆ ಕಠಿಣ ಜೈಲು ಶಿಕ್ಷೆಯ ಭೀತಿ ಎದುರಾಗುತ್ತದೆ.

ಸುಪ್ರೀಂ ಅಭಿಪ್ರಾಯ ಏನು?
ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ, ಎಲ್ಲ ಪ್ರಕರಣಗಳನ್ನು ಒಂದೇ ತಟ್ಟೆಯಲ್ಲಿ ತೂಗುವುದು ನ್ಯಾಯಸಮ್ಮತವಲ್ಲ. ಯಾವುದು ನಿಜವಾದ ಅಪರಾಧ ಮತ್ತು ಯಾವುದು ಒಮ್ಮತದ ಹದಿಹರೆಯದ ಸಂಬಂಧ ಎಂಬುದನ್ನು ಗುರುತಿಸುವ ಸ್ಪಷ್ಟ ಕಾನೂನು ಮಾನದಂಡಗಳು ಅಗತ್ಯ.

ಮುಂದಿನ ದಾರಿ!
ಈ ಸೂಚನೆಗಳು ಕೇವಲ ಕಾನೂನು ತಿದ್ದುಪಡಿಯ ಕುರಿತಲ್ಲ, ಬದಲಾಗಿ ಮಕ್ಕಳ ರಕ್ಷಣೆಯ ಜೊತೆಗೆ ಯುವಕರ ಭವಿಷ್ಯವನ್ನು ರಕ್ಷಿಸುವ ಸಮತೋಲನದ ಅಗತ್ಯವನ್ನೂ ಒತ್ತಿಹೇಳುತ್ತವೆ. ಕೇಂದ್ರ ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಈಗ ದೇಶದ ಗಮನ ಸೆಳೆದಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries