ಕಾಸರಗೊಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿ ವತಿಯಿಂದ ಗ್ರಾಮೀಣ ಹೆಣ್ಮಕ್ಕಳ ಅಪೂರ್ವ ಸಹೋದರಿಯರಿಂದ ವಾದ್ಯ ಸಂಗೀತ ಕಾರ್ಯಕ್ರಮ'ಶ್ರುತಿ ಸುಗಂಧ'ಕಾರ್ಯಕ್ರಮ ಜ. 17ರಂದು ಸಂಜೆ 4ರಿಂದ ಕಾಸರಗೊಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಗಾಯಕಿ, ಮಧೂರು ಗ್ರಾಪಂ ಅಧ್ಯಕ್ಷೆ, ಸುಜ್ಞಾನಿ ಶ್ಯಾನುಭಾಗ್ ಸಮಾರಂಭ ಉದ್ಘಾಟಿಸುವರು. ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ಅದ್ಯಕ್ಷತೆ ವಹಿಸುವರು. ವಿದುಷಿ, ಬದಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ ಮುಖ್ಯ ಅತಿಥಿಯಗಿ ಭಾಗವಹಿಸುವರು.


