ಉಪ್ಪಳ: ಬಿರುವೆರ್ ಕುಡ್ಲ ಇದರ ಪೈವಳಿಕೆ ಘಟಕದ 4 ನೇ ವರ್ಷದ ವಾರ್ಷಿಕೋತ್ಸವ ಮುಳಿಗದ್ದೆಯಲ್ಲಿ ಭಾನುವಾಶರ ನಡೆಯಿತು. ಘಟಕದ ಅಧ್ಯಕ್ಷ ಗಣೇಶ್ ಕುಮಾರ್ ಸ್ಥಾನದ ಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.ಜಾತಿ ಭೇದ ಮರೆತು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಕಲ್ಪದಂತೆ ಸಂಘಟನೆಯ ಮೂಲಕ ಸಮಾಜಕ್ಕೆ ನಮ್ಮದಾದ ಸೇವೆಯನ್ನು ಕೊಟ್ಟರೆ ಭಗವಂತನ ಅನುಗ್ರಹ ಸದಾ ನಮಗೆ ಇರುವುದೆಂದು ಅನುಗ್ರಹಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಉಪನ್ಯಾಸ ನೀಡಿದರು. ಸಭೆಯಲ್ಲಿ ಮಾಣಿಲ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಶ್ರೀಬ್ರಹ್ಮ ಬೈದರ್ಕಳ ಗರಡಿ ಅಮ್ಮೇರಿ ಚಿಪ್ಪಾರು ಇದರ ಅಧ್ಯಕ್ಷ ಅಶೋಕ್ ಪೂಜಾರಿ ಎಂ.ಸಿ ಲಾಲ್ ಭಾಗ್, ಪೈವಳಿಕೆ ಗಾಮ ಪಂಚಾಯತಿ ಸದಸ್ಯೆ ಯಶೋದ ಚಕ್ಕರೆಗುಳಿ, ಮಾಜಿ ಪಂಚಾಯತಿ ಸದಸ್ಯೆ ಮಮತ ಸುದೆಂಬಳ, ದೊಡ್ಡಮನೆ ತರವಾಡು ಬಾಬು ಪೂಜಾರಿ, ಗುಡ್ಡೆಮನೆ ತರವಾಡು ಶ್ರೀಕೃಷ್ಣ ಪೂಜಾರಿ, ಮೀಪುಗುರಿ ತರವಾಡು ಧೂಮಪ್ಪ ಪೂಜಾರಿ, ಶ್ರೀನಿವಾಸ ಪೂಜಾರಿ ಸೋಂಕಾಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಎಸ್ಸೆಲ್ಸಿಯಲ್ಲಿ 2024-2025ನೇ ಸಾಲಿನ ಅತ್ಯಧಿಕ ಅಂಕ ಪಡೆದ ಕುಮಾರಿ ಶ್ರೀಯಾ ಕೆ.ಎಂ ಇವರನ್ನು ಗೌರವಿಸಲಾಯಿತು. ಸೇವಾ ಯೋಜನೆ ಎಂದು ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಮಕ್ಕಳಿಗೆ ಗೌರವ ಧನ ಸಹಾಯ ನೀಡಲಾಯಿತು. ವಸಂತ ಮಾಸ್ತರ್ ಅಮ್ಮೇರಿ ಸ್ವಾಗತಿಸಿ, ಕಸ್ತೂರಿ ಕಣಿಹಿತ್ತಿಲು ವಂದಿಸಿದರು. ರವಿ ಎಸ್.ಎಂ. ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕದ ಅಂಗವಾಗಿ ಗಣಪತಿ ಹೋಮ, ಗುರು ಪೂಜೆ, ಸತ್ಯನಾರಾಯಣ ಪೂಜೆ ನಡೆಯಿತು.

.jpg)
.jpg)
.jpg)
