HEALTH TIPS

1963 ರ ಪಾಕ್‌-ಚೀನಾ ಒಪ್ಪಂದ ಕಾನೂನುಬಾಹಿರ; ಶಕ್ಸ್‌ಗಮ್ ಕಣಿವೆಯ ಮೇಲಿನ ಚೀನಾ ಹಕ್ಕು ತಿರಸ್ಕರಿಸಿದ ಸೇನಾ ಮುಖ್ಯಸ್ಥ

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ನಡುವಿನ 1963 ರ ಗಡಿ ಒಪ್ಪಂದವನ್ನು (1963 Pakistan-China Agreement Illegal) ಕಾನೂನುಬಾಹಿರವೆಂದು ಘೋಷಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, (Upendra Dwivedi) ಈ ಪ್ರದೇಶದಲ್ಲಿ ನಡೆಯುವ ಯಾವುದೇ ಚಟುವಟಿಕೆ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.

ಶಕ್ಸ್‌ಗಮ್ ಕಣಿವೆಯ ಮೇಲಿನ ಚೀನಾದ ಹೊಸ ಹಕ್ಕುಗಳನ್ನು ಭಾರತ ಮಂಗಳವಾರ ತಿರಸ್ಕರಿಸಿದೆ. ಈ ವಿಷಯದ ಕುರಿತು ಮಾತನಾಡಿದ ಜನರಲ್ ದ್ವಿವೇದಿ, ಪಾಕಿಸ್ತಾನವು ಶಕ್ಸ್‌ಗಮ್ ಕಣಿವೆಯ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟ 1963 ರ ಒಪ್ಪಂದವನ್ನು ಭಾರತ ಅಮಾನ್ಯವೆಂದು ಪರಿಗಣಿಸುತ್ತದೆ ಎಂದು ಹೇಳಿದರು.

ನಾವು ಅಲ್ಲಿ ಯಾವುದೇ ಚಟುವಟಿಕೆಯನ್ನು ಸ್ವೀಕರಿಸುವುದಿಲ್ಲ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿದಂತೆ, ನಾವು ಅದನ್ನು ಸ್ವೀಕರಿಸುವುದಿಲ್ಲ ಮತ್ತು ಅದನ್ನು ಎರಡೂ ರಾಷ್ಟ್ರಗಳು ನಡೆಸುತ್ತಿರುವ ಕಾನೂನುಬಾಹಿರ ಕ್ರಮವೆಂದು ಪರಿಗಣಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಹೇಳಿದ್ದಾರೆ. ಚೀನಾ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಶಕ್ಸ್‌ಗಮ್ ಕಣಿವೆಯ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪುನರುಚ್ಚರಿಸಿದ ನಂತರ ಮತ್ತು ಆ ಪ್ರದೇಶದಲ್ಲಿನ ತನ್ನ ಮೂಲಸೌಕರ್ಯ ಯೋಜನೆಗಳನ್ನು ಸಮರ್ಥಿಸಿಕೊಂಡ ನಂತರ ಅವರ ಹೇಳಿಕೆಗಳು ಬಂದಿವೆ.

ಭಾರತದ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಈ ಪ್ರದೇಶವು ಚೀನಾಕ್ಕೆ ಸೇರಿದ್ದು, ಬೀಜಿಂಗ್ ಅಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಹಕ್ಕನ್ನು ಹೊಂದಿದೆ ಎಂದು ಹೇಳಿದ್ದಾರೆ. ನೀವು ಹೇಳಿದ ಪ್ರದೇಶವು ಚೀನಾಕ್ಕೆ ಸೇರಿದೆ. ಚೀನಾ ತನ್ನದೇ ಆದ ಭೂಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವನ್ನು ನಡೆಸುವುದು ಸಂಪೂರ್ಣವಾಗಿ ಸಮರ್ಥನೀಯ ಎಂದು ಹೇಳಿದ್ದಾರೆ.

1963 ರ ಒಪ್ಪಂದ ಕಾನೂನುಬಾಹಿರ

ಶಕ್ಸ್‌ಗಮ್ ಕಣಿವೆ ಭಾರತದ ಭೂಪ್ರದೇಶದ ಭಾಗವಾಗಿದೆ ಮತ್ತು 1963 ರಲ್ಲಿ ಸಹಿ ಹಾಕಲಾದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದ ಎಂದು ಕರೆಯಲ್ಪಡುವ ಒಪ್ಪಂದವನ್ನು ಭಾರತ ಎಂದಿಗೂ ಗುರುತಿಸಿಲ್ಲ ಎಂದು ವಿದೇಶಾಂಗ ಸಚಿವಾಲಯ ನಿರಂತರವಾಗಿ ಸಮರ್ಥಿಸಿಕೊಂಡಿದೆ. ಚೀನಾ ಮತ್ತು ಪಾಕಿಸ್ತಾನ ನಡುವಿನ ಗಡಿಯನ್ನು ವ್ಯಾಖ್ಯಾನಿಸಲು 1963 ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದಕ್ಕೆ ಮಾರ್ಚ್ 2, 1963 ರಂದು ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಡಿಯಲ್ಲಿ ಕಾಶ್ಮೀರ ಪ್ರದೇಶದ ಒಂದು ಭಾಗವಾದ ಶಕ್ಸ್‌ಗಮ್ ಕಣಿವೆಯ ನಿಯಂತ್ರಣವನ್ನು ಪಾಕಿಸ್ತಾನ ಚೀನಾಕ್ಕೆ ವರ್ಗಾಯಿಸಿತು.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಭಾರತದ ಆಕ್ಷೇಪಣೆಗಳನ್ನು ಚೀನಾ ತಳ್ಳಿಹಾಕಿದೆ, ಈ ಯೋಜನೆಯು ಸ್ಥಳೀಯ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಆರ್ಥಿಕ ಸಹಕಾರ ಉಪಕ್ರಮವಾಗಿದೆ ಎಂದು ಹೇಳಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries