ಬುಧವಾರ ಬೆಳಿಗ್ಗೆ ಪತನವಾಗಿ ಅಜಿತ್ ಪವಾರ್ ಮೃತಪಟ್ಟ ವಿಮಾನವು 2023ರಲ್ಲಿಯೂ ಕೂಡ ಅಪಘಾತಕ್ಕೀಡಾಗಿತ್ತು. 2023ರ ಸೆಪ್ಟೆಂಬರ್ 14 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆಯ ನಡುವೆ ವಿಮಾನವು ಲ್ಯಾಂಡಿಂಗ್‌ಗೆ ಪ್ರಯತ್ನಿಸುವಾಗ ರನ್‌ವೇಯಿಂದ ಜಾರಿ ಅಪಘಾತವಾಗಿತ್ತು ಎಂದು NDTV ವರದಿ ಮಾಡಿದೆ.
ಲಿಯರ್‌ಜೆಟ್ 45 ವಿಮಾನ ಮುಂಬೈನಿಂದ ಹಾರಾಟ ಆರಂಭಿಸಿದ ಒಂದು ಗಂಟೆಯ ನಂತರ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡಿದೆ ಎಂದು ವರದಿಯಾಗಿದೆ.
ಜಿಲ್ಲಾ ಪರಿಷತ್‌ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ಚುನಾವಣೆ ಹಿನ್ನೆಲೆ ಪವಾರ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಬಾರಾಮತಿ ವಿಮಾನ ನಿಲ್ಧಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿದೆ.

