ಪೆರ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷಾಚರಣೆಯ ಅಂಗವಾಗಿ ಫೆ.22 ರಂದು ಪೆರ್ಲದಲ್ಲಿ ಬೃಹತ್ ಹಿಂದೂ ಸಮಾವೇಶ ಜರಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿ ರಚನಾ ಸಭೆ ಪೆರ್ಲ ಶ್ರೀ ಶಂಕರ ಸದನದಲ್ಲಿ ಜರುಗಿತು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಕಾರ್ಯವಾಹ ಪವಿತ್ರನ್ ಕಾಸರಗೋಡು ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಹಿಂದೂ ಸಮ್ಮೇಳನ ಸಂಯೋಜಕ ರಮೇಶ್ ಎಣ್ಮಕಜೆ ಉಪಸ್ಥಿತರಿದ್ದರು.
ಧಾರ್ಮಿಕ ಮುಂದಾಳುಗಳು ಯಾ ದೇವಾಲಯಗಳ ಆಡಳಿತ ಮೊಕ್ತೇಸರರನ್ನು ಸಮಿತಿ ರಕ್ಷಾಧಿಕಾರಿಗಳನ್ನಾಗಿ ಹಾಗೂ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಿಂದ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸದಾನಂದ ಶೆಟ್ಟಿ ಕುದ್ವ, ಉದಯ ಚೆಟ್ಟಿಯಾರ್, ಕೃಷ್ಣ ಶ್ಯಾನುಭಾಗ್, ಪ್ರಸನ್ನ ಮುಳಿಯಾಲ, ಶ್ರೀಕೃಷ್ಣ ಭಟ್ ಕೊಟೆ, ರಾಧಾಕೃಷ್ಣ ಭಟ್ ಪತ್ತಡ್ಕ ಭಾಸ್ಕರ್ ರೈ, ಪದ್ಮನಾಭ ಶೆಟ್ಟಿ, ರಾಮಚಂದ್ರ ನಾಯಕ್ ಅಲ್ಚಾರ್ ಅವರನ್ನು ರಕ್ಷಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರನ್ನಾಗಿ ಸುಬ್ಬ ಪಾಟಾಳಿ ವಾಣಿನಗರ, ಉಪಾಧ್ಯಕ್ಷರಾಗಿ ಪುಟ್ಟಪ್ಪ ಖಂಡಿಗೆ, ಬಿ ಪಿ ಶ್ರೇಣಿ, ಶ್ರೀಹರಿ ಭಟ್ ಸಜಂಗಡ್ಡೆ, ರಾಜಾರಾಮ ಬಾಳಿಗ ಪೆರ್ಲ, ರಾಜೇಶ್ವರಿ ಬಜಕೂಡ್ಲು, ಅನ್ನಪೂರ್ಣ ನಾರಾಯಣ ಪ್ರಸಾದ್, ಅನಿಲ್ ಕೆ.ಪಿ, ಪ್ರಧಾನ ಕಾರ್ಯದರ್ಶಿಯಗಿ ಹರೀಶ್ ಕೆ.ಪಿ, ಕಾರ್ಯದರ್ಶಿಗಳಾಗಿ ಸುರೇಶ್ ವಾಣಿನಗರ, ಬಾಲಸುಬ್ರಹ್ಮಣ್ಯ ಭಟ್ ಕೋಟೆ, ಅಶೋಕ್ ಬೇಂಗಪದವು, ಗಂಗಾಧರ ಆಲ್ಚಾರ್, ಇಂದಿರ ಕೆ ಜಿ, ಪ್ರದೀಪ್ ಖಂಡೇರಿ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಜಿತ್ ವಂದಿಸಿದರು.

