ಸರಾಸರಿ ಕೊಠಡಿ ಬಾಡಿಗೆ ದರದಲ್ಲಿ (ಎಆರ್‌ಆರ್) ಶೇ 9ರಷ್ಟು ಹೆಚ್ಚಳವಾಗಿದೆ ಮತ್ತು ಹೋಟೆಲ್‌ನ ಕೊಠಡಿ ಬಳಕೆ ಪ್ರಮಾಣ ಶೇ 2.90ರಷ್ಟು ಏರಿಕೆಯಾಗಿದೆ. ಲಭ್ಯವಿರುವ ಪ್ರತಿ ಕೊಠಡಿಯಿಂದ ಬರುವ ವರಮಾನದಲ್ಲಿ ಶೇ 13ರಷ್ಟು ಹೆಚ್ಚಳವಾಗಿದೆ.
ಐಟಿಸಿ ರತ್ನದೀಪ (ಶ್ರೀಲಂಕಾ) ಹೋಟೆಲ್‌ನ ಲಭ್ಯವಿರುವ ಪ್ರತಿ ಕೊಠಡಿಯಿಂದ ಬರುವ ವರಮಾನದ ವಿಷಯದಲ್ಲಿ ಮಾರುಕಟ್ಟೆ ನಾಯಕನ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನದಲ್ಲಿ ಶೇ 21ರಷ್ಟು ಹೆಚ್ಚಳವಾಗಿದ್ದು, ₹1,231 ಕೋಟಿ ಗಳಿಸಿದೆ.
ನವದೆಹಲಿಯ ದ್ವಾರಕಾ ಪ್ರದೇಶದ ಯಶೋಭೂಮಿಯಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸಲು 0.9 ಎಕರೆ ಜಾಗವನ್ನು 91 ವರ್ಷದ ಅವಧಿಗೆ ಐಟಿಸಿ ಹೋಟೆಲ್ ಗುತ್ತಿಗೆ ಪಡೆದುಕೊಂಡಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಐಟಿಸಿ ಹೋಟೆಲ್‌ನ ಷೇರಿನ ಬೆಲೆ ₹187.55 ಆಗಿತ್ತು.
ವಿಶೇಷ ಸೂಚನೆ: ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ 'ಸಮರಸ ಸುದ್ದಿ' ಹೊಣೆಯಲ್ಲ

