ನವದೆಹಲಿ: ಎಟರ್ನಲ್ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ದೀಪಿಂದರ್ ಗೋಯಲ್ ಅವರು ರಾಜಿನಾಮೆ ನೀಡಿದ್ದಾರೆ. ಎಟರ್ನಲ್ ಕಂಪನಿಯ ಭಾಗವಾಗಿರುವ ಬ್ಲಿಂಕ್‌ಇಟ್‌ನ ಸಿಇಒ ಅಲ್ಬಿಂದರ್ ಧಿಂಡ್ಸಾ ಅವರು ಎಟರ್ನಲ್‌ನ ಸಿಇಒ ಆಗಿ ಫೆಬ್ರುವರಿ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹೊಸ ಆಲೋಚನೆಗಳ ಜೊತೆ ಕೆಲಸ ಮಾಡಲು ಹಾಗೂ ಕಂಪನಿಯ ಉಪಾಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲು ಈಗಿನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಗೋಯಲ್ ಅವರು ಷೇರುದಾರರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಷೇರುದಾರರ ಒಪ್ಪಿಗೆ ಪಡೆದು, ಗೋಯಲ್ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಹಾಗೂ ಕಂಪನಿಯ ಉಪಾಧ್ಯಕ್ಷರನ್ನಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ ಎಂದು ಕಂಪನಿಯ ಷೇರುಪೇಟೆಗೆ ಮಾಹಿತಿ ನೀಡಿದೆ.

