ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ವೃಂದಾವನ ಧಾರ್ಮಿಕ ಸಾಂಸ್ಕøತಿಕ ಸಮಿತಿಯ ವತಿಯಿಂದ ಏಕಾಹ ಭಜನೆ ಜ.24 ಶನಿವಾರ ಸೂರ್ಯೋದಯದಿಂದ ಜ.25 ಭಾನುವಾರ ಸೂರ್ಯೋದಯದ ತನಕ ಜರಗಲಿರುವುದು. ಪುರುಷೋತ್ತಮ ಭಟ್ ಮಿಂಚಿನಡ್ಕ ದೀಪ ಬೆಳಗಿಸುವುದರೊಂದಿಗೆ ಭಜನೆ ಆರಂಭವಾಗಲಿದೆ. ವಿವಿಧ ಭಜನಾ ಸಂಘಗಳು ಭಜನಾ ಸೇವೆಯನ್ನು ನಡೆಸಿಕೊಡಲಿದ್ದಾರೆ.

