ಬದಿಯಡ್ಕ: ರಂಗಚಿನ್ನಾರಿ ಕಾಸರಗೋಡು ಸಾಮಾಜಿಕ ಸಾಂಸ್ಕøತಿ ಸಂಸ್ಥೆಯ ಮಹಿಳಾ ಘಟಕ ನಾರಿ ಚಿನ್ನಾರಿಯ ವತಿಯಿಂದ ಗ್ರಾಮೀಣ ಹೆಣ್ಮಕ್ಕಳ, ಅಪೂರ್ವ ಸಹೋದರಿಯರಿಂದ ವಾದ್ಯ ಸಂಗೀತ ಶ್ರುತಿ ಸುಗಂಧ ಶನಿವಾರ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರಗಿತು. ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಗಾಯತ್ರಿ ಎಸ್.ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಭರತನಾಟ್ಯ ಕಲಾವಿದೆ ಹಾಗೂ ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ವಿದುಷಿ ಅಶ್ವಿನಿ ಕೆ.ಎಂ. ಅವರನ್ನು ಸನ್ಮಾನಿಸಲಾಯಿತು.

.jpg)
