ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಹಿರಿಯರ ದಿನವನ್ನು ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಚಿನ್ಮಯ ಮಿಷನ್ ಮುಖ್ಯಸ್ಥ ಸ್ವಾಮಿ ಜೀ ವಿವಿಕ್ತಾನಂದ ಸರಸ್ವತಿ ಅವರು ಸಮಾರಂಭ ಉದ್ಘಾಟಿಸಿದರು. ಶಾಲಾ ಹಳೇ ವಿದ್ಯಾರ್ಥಿನಿ ಡಾ. ರೋಷಿತಾ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಹಿರಿಯರೊಂದಿಗೆ ಉಪಯುಕ್ತವಾದ ಆರೋಗ್ಯ ಸಲಹೆಗಳನ್ನು ಹಂಚಿಕೊಂಡರು.
ವಿದ್ಯಾಲಯ ಪ್ರಾಂಶುಪಾಲ ಸುಕುಮಾರನ್. ಟಿ, ಮುಖ್ಯ ಶಿಕ್ಷಕಿ ಸಿಂಧು ಶಶೀಂದ್ರನ್, ಪೂರ್ಣಿಮಾ ಎಸ್ ಆರ್ ಉಪಸ್ಥಿತರಿದ್ದರು.
ಶಾಲಾವಿದ್ಯಾರ್ಥಿನಿ ಅಗ್ನಾ ಎಸ್ ಸ್ವಾಗತಿಸಿದರು. ಅವರು ನೆರವೇರಿಸಿದರು. ಆಶಿಕಾ ವಂದಿಸಿದರು. ಈ ಸಂದರ್ಭ ವಿವಿಧ ಚಟುವಟಿಕೆ ಹಾಗೂ ಆಟಗಳಲ್ಲಿ ಮಕ್ಕಳು ಮತ್ತುಹಿರಿಯರು ಭಾಗವಹಿಸಿ ಕಾರ್ಯಕ್ರಮಕ್ಕೆಮೆರಗು ನಿಡಿದರು. ಪ್ರೀತಿಯ ಸಂಕೇತವಾಗಿ ವಿವಿಕ್ತಾನಂದ ಸರಸ್ವತೀ ಅವರು ಹಿರಿಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು.


