ಕಾಸರಗೋಡು: ನಗರದಲ್ಲಿ ಕಳೆದ 32 ವರ್ಷಗಳಿಂದ ಚಟುವಟಿಕೆ ನಡೆಸುತ್ತಿರುವ ಬಾಲಭವನ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಶಾಲಾ ಸಭಾಂಗಣದಲ್ಲಿ ಜರುಗಿತು. ಸಮಾರಂಭದಲ್ಲಿ ಕಾಸರಗೋಡು ನಗರ ಠಾಣೆಯ ಪೆÇಲೀಸ್ ಇನ್‍ಸ್ಪೆಕ್ಟರ್ ನಳಿನಾಕ್ಷನ್ ಮತ್ತು ಶಾಲಾ ಮುಖ್ಯ ಶಿಕ್ಷಕಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ ಪೈ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರ ಸಭಾ ಉಪಾಧ್ಯಕ್ಷ ಮಹಮ್ಮದ್ ಅಸ್ಲಾಂ, ನಗರಸಭಾ ಸದಸ್ಯ ರವೀಂದ್ರ ಪೂಜಾರಿ, ಸಂಸ್ಥೆಯ ಸಲಹೆಗಾರ ಡಾಕ್ಟರ್ ಕೆ.ಎನ್ ವೆಂಕಟ್ರಮಣ ಹೊಳ್ನ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು. ಪವಿಲ ಟೀಚರ್ ಸ್ವಾಗತಿಸಿದರು. ಶಾಲಾ ಮುಕ್ಯ ಶಿಕ್ಷಕಿ ಲೀಲಾವತಿ ಕೆ ನಾಯರ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಸುಶ್ಮಿತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ರಕ್ಷಕ ಶಿಕ್ಷಕ ಸಂಘದ ಕೋಶಾಧಿಕಾರಿ ಪ್ರಕಾಶ್ ವಂದಿಸಿದರು. ದೀಪ್ತಿ ಟೀಚರ್ ಮತ್ತು ಸುದೀಪ ಟೀಚರ್ ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮ ಜರುಗಿತು.


