ತಿರುವನಂತಪುರಂ: ಐದು ದಿನಗಳ ಕೆಲಸದ ದಿನವನ್ನು ನಿಗದಿಪಡಿಸಲು ಒತ್ತಾಯಿಸಿ ಬ್ಯಾಂಕ್ ನೌಕರರ ಸಂಘವಾದ ಯುನೈಟೆಡ್ ಪೋsರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಜ. 27 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಕಳೆದ ವರ್ಷದ ವೇತನ ಪರಿಷ್ಕರಣಾ ಒಪ್ಪಂದದ ಸಮಯದಲ್ಲಿ ಶನಿವಾರಗಳನ್ನು ರಜಾದಿನವನ್ನಾಗಿ ಮಾಡುವ ಬಗ್ಗೆ ಭಾರತೀಯ ಬ್ಯಾಂಕುಗಳ ಸಂಘ ಮತ್ತು ಯುನೈಟೆಡ್ ಫೆÇೀರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಒಪ್ಪಂದಕ್ಕೆ ಬಂದಿದ್ದವು, ಆದರೆ ಇದನ್ನು ಜಾರಿಗೆ ತರಲಾಗಿಲ್ಲ ಎಂದು ಸಂಘವು ತಿಳಿಸಿದೆ.
ಪ್ರಸ್ತುತ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ರಜಾದಿನಗಳಾಗಿವೆ.
27 ರಂದು ಮುಷ್ಕರಕ್ಕೆ ಕರೆ ನೀಡಿದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಾಚರಣೆಯು ಸತತ ನಾಲ್ಕು ದಿನಗಳವರೆಗೆ ಅಡ್ಡಿಯಾಗಲಿದೆ.

