ಕಾಸರಗೋಡು: ಸಂಶೋಧನೆ, ತಂತ್ರಜ್ಞಾನ ಏಕೀಕರಣ, ವಿಜ್ಞಾನಿಗಳ ನಡುವಿನ ಸಹಯೋಗ ಮತ್ತು ಮೊಬೈಲ್ ತಂತ್ರಜ್ಞಾನದ ಮೂಲಕ ವಿತರಿಸಲಾದ ಡೇಟಾ ವಿಶ್ಲೇಷಣೆ, ಮುನ್ಸೂಚಕ ಮಾದರಿ ಮತ್ತು ನಿಖರತೆಯ ಬಳಕೆ ಭವಿಷ್ಯದಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾಗಲಿರುವುದಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ತಿಳಿಸಿದ್ದಾರೆ.
ಅವರು ಸೋಮವಾರ ಕಾಸರಗೋಡಿನ ಐಸಿಎಆರ್ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಐಸಿಎಆರ್-ಸಿಪಿಸಿಆರ್‍ಐ)ದ 110 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ತೋಟಗರಿಕಾ ಬೆಳೆಗಳ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು. ಹವಾಮಾನದ ವೈಪರೀತ್ಯದಿಂದ ಉಂಟಾಗುವ ಅಪಾಯ, ಬೆಲೆ ಏರಿಳಿತ ಮತ್ತು ಕಾರ್ಮಿಕರ ಕೊರತೆ ಸೇರಿದಂತೆ ತೋಟಗಾರಿಕೆ ವಲಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಮಗ್ರ ಅವಲೋಕನ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಹವಾಮಾನ ಬದಲಾವಣೆಯ ಹೊಂದಾಣಿಕೆ, ಸಂಪನ್ಮೂಲ ದಕ್ಷತೆ, ಕೀಟ ಮತ್ತು ರೋಗ ನಿರ್ವಹಣೆ, ಮೌಲ್ಯವರ್ಧನೆ, ಯಾಂತ್ರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ತಂತ್ರಗಳು ಸೇರಿದಂತೆ ಸಿಂಪೆÇೀಸಿಯಂನ ಉದ್ದೇಶದ ಬಗ್ಗೆ ವಿವರಿಸಿದರು.
ಎಸ್‍ಓಪಿಓಪಿಆರ್‍ಓಡಿ ಅಧ್ಯಕ್ಷ ಡಾ. ಪಿ. ರೆಥಿನಮ್ ಅವರು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡುವುದು ಕೃಷಿ ಅಭಿವೃದ್ಧಿಗೆ ಪೂರಕವಾಗಿರುವುದಾಗಿ ತಿಳಿಸಿದ ಅವರು ಕೃಷಿ ಅಭಿವೃದ್ಧಿಯಲ್ಲಿ ಸಂಸ್ಥೆಯ ಶ್ರಮವನ್ನು ಶ್ಲಾಘಿಸಿದರು. ಪುತ್ತೂರಿನ ಐಸಿಎಆರ್-ಡಿಸಿಆರ್ ನಿರ್ದೇಶಕ ಡಾ.ಜೆ.ದಿನಕರ ಅಡಿಗ, ಐಸಿಎಆರ್-ಐಐಒಪಿಆರ್ ಪೆಡವೇಗಿಯ ನಿರ್ದೇಶಕ ಡಾ.ಕೆ.ಸುರೇಶ್, ಐಸಿಎಆರ್-ಸಿಪಿಸಿಆರ್‍ಐ ಮಾಜಿ ನಿರ್ದೇಶಕ ಡಾ.ಕೆ.ಯು.ಕೆ.ನಂಬೂದಿರಿ, ಆರ್‍ಆರ್‍ಐಐ, ಕೊಟ್ಟಾಯಂ ನಿರ್ದೇಶಕ ಡಾ.ದೇಬಬ್ರತಾ ರಾಯ್, ಐಸಿಎಆರ್ ಐಸಿಸಿಆರ್ ಐ ನಿರ್ದೇಶಕ ಡಾ.ಸೆಂಥಿಲ್‍ಕುಮಾರ್, ವಿಪಿಎಎಸ್‍ಐ ನಿರ್ದೇಶಕ ಜೆ. ವಾಲ್ಪಾರೈ, ಮೈಲಪುದಂಪಾರ ಐಸಿಆರ್ ನಿರ್ದೇಶಕಿ ಡಾ. ಎ.ಬಿ. ರೇಮಾ ಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ತೆಂಗಿನಕಾಯಿ ಆಧಾರಿತ ವಿವಿಧ ಉತ್ಪನ್ನ ಬಿಡುಗಡೆಗೊಳಿಸಲಾಯಿತು.ಕೃಷಿವಲಯಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕೃಷ್ಯುತ್ಪನ್ನಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಆಯೋಜಿಸಲಾಗಿತ್ತು. ಪ್ರಧಾನ ವಿಜ್ಞಾನಿ ಮತ್ತು ಸಾಮಾನ್ಯ ಸಂ
ಚಾಲಕ ಡಾ. ರವಿ ಭಟ್ ಸ್ವಾಗತಿಸಿದರು. ಡಾ. ಕೆ. ಪೆÇನ್ನುಸ್ವಾಮಿವಂದಿಸಿದರು.

