ಕಾಸರಗೋಡು: ನೀಲೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಸೋಮವಾರ ನಡೆಯಿತು. ಹಣಕಾಸು ಸ್ಥಾಯಿ ಸಮಿತಿಯಲ್ಲಿ ಮಹಿಳಾ ಮೀಸಲಾತಿಗೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಮಹಿಳಾ ಮೀಸಲು ಸ್ಥಾನ ಮತ್ತು ಹಣಕಾಸು ಸ್ಥಾಯಿ ಸಮಿತಿಯಲ್ಲಿ ಉಳಿದ ಸಾಮಾನ್ಯ ಸ್ಥಾನಗಳಿಗೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಜ. 7ರಂದು ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ.
ವಿವಿಧಸ್ಥಾಯಿ ಸಮಿತಿಯಲ್ಲಿ ಮಹಿಳಾ ಮೀಸಲು ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಅಭಿವೃದ್ಧಿ ಸ್ಥಾಯೀ ಸಮಿತಿಗೆ 4ನೇ ಕಯ್ಯೂರು ಡಿವಿಶನ್‍ನಿಂದ ಆಯ್ಕೆಯಾದ ಶೀಬಾ ಪಿ ಬಿ, ಕಲ್ಯಾಣ ಸ್ಥಾಯಿ ಸಮಿತಿಗೆ 5ನೇ ಚೀಮೇನಿ ಡಿವಿಶನಿನ ಶ್ರೀಲತಾ ಸಿ.ಟಿ, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿಗೆ 9ನೇ ಉದಿನೂರು ಡಿವಿಶನಿನ ಪೂಮಣಿ ಕೆ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಕೆ. ಅಜೇಶ್, ಬ್ಲಾಕ್ ಕಾರ್ಯದರ್ಶಿ ಟಿ. ರಾಗೇಶ್, ತಹಸೀಲ್ದಾರ್ ಎಲ್.ಎ.(ಎನ್.ಎಚ್) ಎಲ್. ಕೆ. ಸುಬೈರ್, ವಿಶೇಷಾಧಿಕಾರಿ ಉಪ ತಹಸೀಲ್ದಾರ್ ಕೆ.ವಿ.ಬಿಜು, ಸಹಾಯಕ ಕಾರ್ಯದರ್ಶಿಗಳಾದ ಎಸ್.ಎನ್.ಪ್ರಮೋದ್, ಪಿ.ಅಜಯನ್ ಮೊದಲಾದವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

