ಬದಿಯಡ್ಕ: ಯಕ್ಷಮಿತ್ರರು ಬಾಂಜತ್ತಡ್ಕ ಮತ್ತು ಊರ ಹತ್ತುಸಮಸ್ಥರ ವತಿಯಿಂದ 2ನೇ ವರ್ಷದ ಯಕ್ಷಗಾನ ಬಯಲಾಟವು ನಾಳೆ(ಜ.31 ಶನಿವಾರ) ಸಂಜೆ 7.30ಕ್ಕೆ ಬಾಂಜತ್ತಡ್ಕದಲ್ಲಿ ಜರಗಲಿರುವುದು. ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರು ರಂಗಮಾಣಿಕ್ಯ ಸುಬ್ಬು ಸಂಟ್ಯಾರ್ ವಿರಚಿತ ಗುಂಡದ ಗುರ್ಕಾರ ಎಂಬ ತುಳುಕಥಾ ಭಾಗವನ್ನು ಆಡಿತೋರಿಸಲಿರುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

