ನವದೆಹಲಿ: ಸ್ವಿಟ್ಜರ್‌ಲೆಂಡ್‌ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್‌ವೊಂದರ ಬಾರ್‌ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಂಗೀತ ಕಚೇರಿ ವೇಳೆ ಪಟಾಕಿ ಸಿಡಿದು ಸ್ಪೋಟ ಸಂಭವಿಸಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಧಿಕಾರಿಗಳು ದೃಢಪಡಿಸಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಭಾರಿ ಪ್ರಮಾಣದ ಬೆಂಕಿಯು ಕೆನ್ನಾಲಿಗೆ ಚಾಚಿರುವುದನ್ನು ಕಾಣಬಹುದಾಗಿದೆ.
ಕೆಲ ಸ್ಫೋಟದ ಸದ್ದು ಕೇಳಿಬಂದಿದೆ. ಕೆಲವರು ಮೃತಪಟ್ಟಿದ್ದು, ಮತ್ತೆ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಗೈಥನ್ ಲ್ಯಾಥಿಯನ್ ಹೇಳಿದ್ದಾರೆ.
ಮನಮೋಹಕ ಸ್ವಿಸ್ ಆಲ್ಪ್ಸ್‌ನ ಹೃದಯಭಾಗದಲ್ಲಿರುವ ಕ್ರಾನ್ಸ್ ಮೊಂಟಾನಾ ಪಟ್ಟಣ, ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗಾಲ್ಫ್‌ನಂತಹ ಚಟುವಟಿಕೆಗಳಿಂದ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸ್ವಿಟ್ಜರ್‌ಲೆಂಡ್‌ನ ಜಿನೀವಾದ ಹೃದಯಭಾಗದಲ್ಲಿರುವ ಅತ್ಯಂತ ಹಳೆಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಿಂಗಳುಗಳ ನಂತರ ಈ ಘಟನೆ ಸಂಭವಿಸಿದೆ.
1834ರಲ್ಲಿ ಆರಂಭವಾದ ಮತ್ತು ದೇಶದ ಹೆಗ್ಗುರುತೆಂದು ಪರಿಗಣಿಸಲಾದ ಪ್ರಸಿದ್ಧ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗ್ಯೂಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

