ಮಾಸ್ಕೊ: ರಷ್ಯಾ ವಶಪಡಿಸಿಕೊಂಡಿರುವ, ಉಕ್ರೇನ್ ಬಂದರು ನಗರಿ ಖೆರ್ಸನ್ ಪ್ರದೇಶದ ಖೊರ್ಲಿ ಎಂಬಲ್ಲಿ ಕೆಫೆ ಮತ್ತು ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್ ನಡೆಸಿದ ರಹಸ್ಯ ಡ್ರೋನ್ ದಾಳಿಯಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ ದಾಳಿ ನಡೆದಿದೆ. ಉಕ್ರೇನ್‌ನ ಮೂರು ಮಾನವ ರಹಿತ ವೈಮಾನಿಕ ವಾಹನಗಳು (ಯುಎವಿ) ಕಪ್ಪು ಸಮುದ್ರ ಕರಾವಳಿ ತೀರದ ಕೆಫೆ ಮತ್ತು ಹೋಟೆಲ್‌ಗಳಿಗೆ ಅಪ್ಪಳಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ 24 ಮಂದಿ ಮೃತಪಟ್ಟಿದ್ದಾರೆ. ಆದರೆ, ಸಾವಿನ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಗಾಯಾಳುಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ ಎಂದು ಖೆರ್ಸನ್ ಪ್ರದೇಶದ ಗವರ್ನರ್ ವ್ಲಾದಿಮಿರ್ ಸಾಲ್ಡೊ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಖೆರ್ಸನ್ ಸೇರಿದಂತೆ ದಕ್ಷಿಣ ಕರಾವಳಿಯಲ್ಲಿ ಹೊಸ ವರ್ಷಾಚರಣೆಗೆ ಸೇರಿದ್ದವರ ಮೇಲೆ ರಹಸ್ಯ ದಾಳಿಗೆ ಮುಂದಾದ ಉಕ್ರೇನ್‌ನ 168ಕ್ಕೂ ಹೆಚ್ಚು 'ಯುಎವಿ'ಗಳನ್ನು ರಷ್ಯಾದ ವೈಮಾನಿಕ ರಕ್ಷಣಾ ವ್ಯವಸ್ಥೆ ಪತ್ತೆಹಚ್ಚಿ ನಾಶಪಡಿಸಿದೆ. ಉಕ್ರೇನ್ ದಾಳಿಯ ಬೆದರಿಕೆ ಇದ್ದಿದ್ದರಿಂದ, ಬುಧವಾರ ರಾತ್ರಿ ದಕ್ಷಿಣ ಮತ್ತು ಮಧ್ಯ ರಷ್ಯಾದಲ್ಲಿನ ಹಲವು ವಿಮಾನ ನಿಲ್ದಾಣಗಳನ್ನು ಹಲವು ಗಂಟೆಗಳ ಕಾಲ ಮುಚ್ಚಲಾಗಿತ್ತು.
'ಮಾಸ್ಕೊ, ಕ್ರಾಸ್ನೊಡರ್, ಕ್ರೈಮಿಯಾ ಗಣರಾಜ್ಯ, ಬ್ರಿಯಾನ್ಸ್ಕ್ ಸೇರಿದಂತೆ ಕರಾವಳಿಯ ಹಲವು ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ದಾಳಿಗೆ ಮುಂದಾದ ಉಕ್ರೇನ್‌ನ 61 ಯುಎವಿಗಳನ್ನು ಹೊಡೆದುರುಳಿಸಲಾಗಿದೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷರಷ್ಯಾ ಯುದ್ಧವನ್ನು ಹೊಸ ವರ್ಷಕ್ಕೆ ಕೊಂಡೊಯ್ಯುತ್ತಿದೆ. ಉದ್ದೇಶಪೂರ್ವಕವಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಹಾಳು ಮಾಡುತ್ತಿದೆ. ಬುಧವಾರವೂ 200ಕ್ಕೂ ಹೆಚ್ಚು ಡ್ರೋನ್ ಮೂಲಕ ದಾಳಿ ನಡೆಸಿದೆ - - ರಷ್ಯಾ ರಕ್ಷಣಾ ಸಚಿವಾಲಯ ಅಧ್ಯಕ್ಷರ ನಿವಾಸ ಸೇರಿ ರಷ್ಯಾವನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ ದಾಳಿಯಲ್ಲಿ ಹೊಡೆದುರುಳಿಸಿದ ಡ್ರೋನ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗುವುದುಹೊಸ ವರ್ಷದ ಸಂಭ್ರಮಾಚರಣೆ ಮೇಲೆ ನಡೆದ ಡ್ರೋನ್ ದಾಳಿಗೆ ಉಕ್ರೇನ್ ನೇರ ಕಾರಣ ಎಂದು ರಷ್ಯಾ ಆರೋಪಿಸಿದೆ. ಆದರೆ ಉಕ್ರೇನ್ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. 'ರಷ್ಯಾದ ಜನರ ಮೇಲೆ ಉಕ್ರೇನ್ ಭಯೋತ್ಪಾದಕ ದಾಳಿ ನಡೆಸಿದೆ' ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಮಾರಿಯಾ ಜಖರೊವಾ ಹೇಳಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ರಾಜತಾಂತ್ರಿಕತೆ ಮೂಲಕ ಕೊನೆಗಾಣಿಸುವ ಪ್ರಯತ್ನ ನಡೆದಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. 'ರಷ್ಯಾ ಡ್ರೋನ್ ದಾಳಿ ಮುಂದುವರಿಸಿರುವುದರಿಂದ ನಾವು ಶಾಂತಿ ಒಪ್ಪಂದದಿಂದ ಶೇ 10ರಷ್ಟು ಹಿಂದೆ ಸರಿದಿದ್ದೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚೆಗೆ ಹೇಳಿದ್ದರು. '

