ಬದಿಯಡ್ಕ: ನೀರ್ಚಾಲು ಶ್ರೀಧರ್ಮಶಾಸ್ತಾ ಸೇವಾಸಮಿತಿಯ 46ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಅಧ್ಯಾಪಿಕೆ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು.
ಸಂಘಟನೆಯ ಮೂಲಕ ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಿಕೊಂಡು ಜನರಲ್ಲಿ ಭಕ್ತಿಯನ್ನು ಮೂಡಿಸುವಂತಾಗಬೇಕು. ಪುರಾಣದ ಕೆಲವು ಕಥೆಗಳು, ಚರಿತ್ರೆಯ ಉದಾಹರಣೆಗಳನ್ನು ನೀಡಿ ನಮ್ಮ ಧರ್ಮ, ಸನಾತನ ಸಂಸ್ಕøತಿಯನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಬಲುಮುಖ್ಯವಾಗಿ ಎಂಬುದನ್ನು ಎಲ್ಲರೂ ಗಮನದಲ್ಲಿರಿಸಬೇಕು ಎಂದರು.
ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ ಎನ್. ಮೈಕುರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಯದೇವ ಖಂಡಿಗೆ ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ತಾಲೂಕು ಕಛೆರಿ ಡೆಪ್ಯೂಟಿ ತಹಸಿಲ್ದಾರ್ ಅಶೋಕ ನಾಯ್ಕ ಎಂ. ಪಾಲ್ಗೊಂಡಿದ್ದರು. ಗುರುಸ್ವಾಮಿಗಳಾದ ಸುಬ್ರಹ್ಮಣ್ಯ ಆಚಾರ್ಯ ನೀರ್ಚಾಲು, ರಮೇಶ ಆಚಾರ್ಯ ನೀರ್ಚಾಲು, ಆರೆಸ್ಸೆಸ್ಸ್ ಬದಿಯಡ್ಕ ಖಂಡ್ ಮಾನ್ಯ ಸಂಘಚಾಲಕ್ ರಮೇಶ ಕಳೇರಿ, ಶ್ರೀ ಧರ್ಮಶಾಸ್ತಾ ಮಿತ್ರ ಮಂಡಳಿಯ ಅಧ್ಯಕ್ಷ ಚೋಮನಾಯ್ಕ, ಮಾತೃಮಂಡಳಿ ಅಧ್ಯಕ್ಷೆ ಶೋಭಾ ನಾರಾಯಣ ಓಣಿಯಡ್ಕ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಶ್ರೀ ಶಾಸ್ತಾ ಬಾಲಗೋಕುಲದ ವಿದ್ಯಾರ್ಥಿಗಳಿಂದ ಪ್ರಾರ್ಥಿಸಿದರು. ಕಾರ್ಯದರ್ಶಿ ಮಹೇಶ್ ನಾಯ್ಕ ಓಣಿಯಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ದೊಡ್ಡಮೂಲೆ ವಂದಿಸಿದರು. ಉಪಾಧ್ಯಕ್ಷ ಸುಧಾಮ ಮಾಸ್ತರ್ ಮಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಪ್ರಸಾದ ಭೋಜನ, ಸಂಜೆ ಮನೀಶ್ ಮತ್ತು ಬಳಗ ಶ್ರೀಶೈಲಂ ನಾರಂಪಾಡಿ ಇವರಿಂದ ತಾಯಂಬಕ, ದೀಪಾರಾಧನೆ, ಭಜನೆ, ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಉಲ್ಪೆ ಮೆರವಣಿಗೆ ಹೊರಟು ನೀರ್ಚಾಲು ಮೇಲಿನ ಪೇಟೆ ದಾರಿಯಾಗಿ ಶ್ರೀಮಂದಿರಕ್ಕೆ ಶ್ರೀ ಧರ್ಮಶಾಸ್ತಾ ಕುಣಿತ ಭಜನಾ ತಂಡ ನೀರ್ಚಾಲು ಹಾಗೂ ಚೆಂಡೆಮೇಳದೊಂದಿಗೆ ಆಗಮಿಸಿತು. ರಾತ್ರಿ ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿ ನೀರ್ಚಾಲು ಇವರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ `ವರ್ಣಪಲ್ಲಟ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

.jpg)
