ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಜಾತ್ರಾ ಮಹೋತ್ಸವದ ಸಿಡುಮದ್ದು ಪ್ರದರ್ಶನ ಹಾಗೂ ಮಾರ್ಚ್ 30 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟದ ಸಹಾಯಾರ್ಥ ಯುವಕ ವೃಂದವು ಹೊರ ತಂದ "ಅಕ್ಷಯನಿಧಿ" ಕೂಪನನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.
ಹುಣ್ಣಿಮೆಯ ವಿಶೇಷ ಭಜನಾ ಸೇವೆಯ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣಪ್ರಸಾದ ಬೇಂಗ್ರೋಡಿಯವರು ಶ್ರೀ ದೇವರಲ್ಲಿ ಪ್ರಾರ್ಥಿಸಿ, ಅಕ್ಷಯನಿಧಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ನವೀನ್ ಚಂದ್ರ ಕಾರ್ಮಾರು, ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ, ಕಾರ್ಯದರ್ಶಿ ಗೋಕುಲ ಶರ್ಮ ಕಾರ್ಮಾರು, ಕೋಶಾಧಿಕಾರಿ ರಾಜೇಶ್ ಕಾರ್ಮಾರು, ಮಹಿಳಾ ವೃಂದದ ಅಧ್ಯಕ್ಷೆ ಸರಸ್ವತಿ ಕಾರ್ಮಾರು, ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಧಾಕೃಷ್ಣ ಮಣಿಯಾಣಿ, ಪುರುಷೋತ್ತಮ ಕಾರ್ಮಾರು, ಜ್ಯೋತಿಷಿ ಅನಂತಕೃಷ್ಣ ಶರ್ಮ ಪುದುಕೋಳಿ, ಪುನೀತ್ ಕಾರ್ಮಾರು, ಜ್ಯೋತಿ ಕಾರ್ಮಾರು, ಲಲಿತ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು.

.jpg)
