ಕುಂಬಳೆ: ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿಯಂತೆ ಧನು ಪೂಜಾ ಮಹೋತ್ಸವ ವೈಭವಯುತವಾಗಿ ನಡೆಯುತ್ತಿದ್ದು ಕಾಸರಗೋಡು ಜಿಲ್ಲೆ ಮಾತ್ರವಲ್ಲದೆ ನೆರೆಯ ದಕ್ಷಿಣ ಕನ್ನಡದ ತಲಪಾಡಿ, ಪುತ್ತೂರು, ವಿಟ್ಲ, ಆರ್ಲಪದವು, ಈಶ್ಚರಮಂಗಲ ಭಾಗದ ಭಕ್ತ ಜನರು ಆಗಮಿಸಿ ಶಾಲಾ ಮಕ್ಕಳಿಗೆ ರಜಾಕಾಲವಾದ್ದರಿಂದ ಮನೆಯವರು ಮಕ್ಕಳು ಮಹಿಳೆಯರ ಸಹಿತ ಭಾನುವಾರ ಸಾಗರೋಪಾದಿಯಾಗಿ ಜನ ಆಗಮಿಸಿದ್ದಾರೆ.
ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಮಾರ್ಗದರ್ಶನದಲ್ಲಿ ಈ ವರ್ಷದ ಧನುಪೂಜೆಯ ಯಶಸ್ವಿಗೆ ಕ್ಷೇತ್ರ ಸೇವಾ ಸಮಿತಿ ಸಕಲ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ.ಆನಂದ ತಿಳಿಸಿದ್ದಾರೆ. ಕ್ಷೇತ್ರದ ಮಹಿಳಾ ಸಮಿತಿ, ಯುವಕ ಸಂಘ, ಭಜನಾ ಸಂಘಗಳ ನೇತೃತ್ವದಲ್ಲಿ ಧನುಪೂಜಾ ಮಹೋತ್ಸವದ ಯಶಸ್ವಿಗೆ ಹಲವು ಕಾರ್ಯಕರ್ತರು ಆಹೋರಾತ್ರಿ ದುಡಿಯುತ್ತಿದ್ದಾರೆ. ವಿವಿಧ ಭಕ್ತರು ಬೆಳಗ್ಗಿನ ಫಲಹಾರ ವ್ಯವಸ್ಥೆಯ ಪ್ರಾಯೋಜಕರಾಗಿ ಸಹಕರಿಸುತ್ತಿದ್ದಾರೆ. ಕಳೆದ ಬಾರಿ ಬ್ರಹ್ಮಕಲಶೋತ್ಸವ ನಡೆದ ಬಳಿಕದ ಪ್ರಥಮ ವರ್ಷದ ಧನುಪೂಜಾ ಮಹೋತ್ಸವವಾದ ಕಾರಣ ನಾಡಿನಲ್ಲಿ ಉತ್ಸವದ ಪ್ರತೀತಿ ಮೂಡಿಸಿದೆ.

.jpg)
.jpg)
