ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‍ಫೇರ್ ಸೊಸೈಟಿಯಿಂದ 4.76ಕೋಟಿ ರೂ. ಮೊತ್ತದ ವಂಚನೆಯೆಸಗಿದ ಪ್ರಕರಣದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಕಣ್ಣೂರು ಕ್ರೈಂ ಬ್ರಾಂಚ್ ವಿಶೇಷ ತಂಡ ಬಂಧಿಸಿದೆ. ಪಳ್ಳಿಕೆರೆ ನಿವಾಸಿ ಅಬೂಬಕ್ಕರ್, ಪೈವಳಿಕೆ ಬಾಯಾರು ನಿವಾಸಿ ಅಬ್ದುಲ್ ಅಜೀಜ್, ಏತಡ್ಕ ನಿವಾಸಿ ಆರಿಫ್ ಹಾಗೂ ನೆಕ್ರಾಜೆ ಮವ್ವಾರು ನಿವಾಸಿ ಶಂಸುದ್ದೀನ್ ಬಂಧಿತರು.
ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‍ಫೇರ್ ಸೊಸೈಟಿ ಸಿಪಿಎಂ ಪಕ್ಷದ ನಿಯಂತ್ರಣದಲ್ಲಿದ್ದು, ಬ್ಯಾಂಕ್ ಲಾಕರ್‍ನಿಂದ 332ಪವನು ಚಿನ್ನಾಭರಣ ಕಳವುಗೈಯಲಾಗಿತ್ತು. ಪ್ರಕರಣದಲ್ಲಿ ಸೊಸೈಟಿ ಕಾರ್ಯದರ್ಶಿ ಕರ್ಮಂತೋಡಿಬಾಳಕಂಡ ನಿವಾಸಿ ಕೆ.ರತೀಶ್ ಒಂದನೇ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆಸಂಬಂಧಿಸಿಮಹಿಳೆ ಸೇರಿದಂತೆ ಎಂಟು ಮಂದಿಯನ್ನು ಈ ಹಿಮದೆ ಬಂಧಿಸಲಾಗಿದೆ. ಕ್ರೈಂ ಬ್ರಾಂಚ್ ಸರ್ಕಲ್ ಇನ್ಸ್ಪೆಕ್ಟರ್ ಬಿ. ಅನೀಶ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.


