ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್‍ಟಿಯು)47ನೇ ಕೇರಳ ರಾಜ್ಯ ಸಮ್ಮೇಳನದ ಅಂಗವಾಗಿ ಪೂರ್ಣಪ್ರಮಾಣದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಗುರುವಾರ ಎನ್‍ಟಿಯು ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಯಿತು.ಲೋಕೇಶ್ ಜೋತ್ಕಲ್ ಸಮಾರಂಭ ಉದ್ಘಾಟಿಸಿದರು. ಎನ್ ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಆರ್ ಎಸ್ ಎಸ್ ದಕ್ಷಿಣ ಕೇರಳ ಬುದ್ಧಿಜೀವಿ ಪಿ. ಉಣ್ಣಿಕೃಷ್ಣನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನುಪ್ ಕುಮಾರ್, ಎ.ಬಿಆರ್ ಎಸ್ ಎಂ ದಕ್ಷಿಣ ಕ್ಷೇತ್ರೀಯ ಪ್ರಮುಖ್ ಎಸ್.ಗೋಪ ಕುಮಾರ್ ಉಪಸ್ಥಿತರಿದ್ದರು.
23ರಂದು ಬೆಳಗ್ಗೆ 9ಕ್ಕೆ ಜಯಕೃಷ್ಣನ್ ಮಾಸ್ಟರ್ ನಗರದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೆ. ಸ್ಮಿತಾ ಧ್ವಜಾರೋಹಣ ನಡೆಸಿ, ಸಮಾರಂಭದ ಅಧ್ಯಕ್ಷತೆ ವಹಿಸುವರು. ಎಬಿಆರ್‍ಎಸ್‍ಎಂ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಸಮಾರಂಭ ಉದ್ಘಾಟಿಸುವರು. ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ, ವಕೀಲ ಪಿ ಮುರಳೀಧರನ್, ಎನ್‍ಜಿಓ ಸಂಘ್ ರಾಜ್ಯ ಸಮಿತಿ ಸದಸ್ಯ ಪಿತಾಂಬರನ್ ಪಾಲ್ಗೊಳ್ಳುವರು. 24ರಂದು ಸರ್ವಜನಿಕ ಸಭೆಯೊಂದಿಗೆ ಸಮ್ಮೇಳನ ಸಂಪನ್ನಗೊಳ್ಳಲಿದೆ.

