ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಸಾಗಿಸುವ ಮಧ್ಯೆ ಪೊಲೀಸರು ಕಾರ್ಯಾಚರಣೆ ನಡೆಸಿ, ವಾಹನ ವಶಪಡಿಸಿಕೊಂಡಿದ್ದಾರೆ. ಅದರಲ್ಲಿದ್ದ ಆರೋಪಿಗಳು ಓಡಿ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರ ನಿವಾಸಿ ಕೆ.ಜೆಡ್ ತಹ್‍ನೂನ್ ಹಾಗೂ ಜುನೈದ್ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬುಧವಾರ ತಡರಾತ್ರಿ ಕುಂಬಳೆ ಠಾಣೆ ಎಸ್.ಐ ಕೆ. ಶ್ರಿಜೇಶ್ ನೇತೃತ್ವದ ಪೊಲೀಸರ ತಂಡ ಪೆಟ್ರೋಲಿಂಗ್ ನಡೆಸುವ ಮಧ್ಯೆ ಆಗಮಿಸಿದ ಮರಳು ತುಂಬಿದ ವಾಹನ ನಿಲ್ಲಿಸಲು ಸೂಚಿಸಿದರೂ, ಪರಾರಿಯಾಗಲೆತ್ನಿಸಿದಾಗ ಹಿಂಬಾಲಿಸುತ್ತಿದ್ದಂತೆ, ವಾಹನ ರಸ್ತೆ ಅಂಚಿಗೆ ನಿಲ್ಲಿಸಿ ಅದರಲ್ಲಿದ್ದವರು ಪರಾರಿಯಾಗಿದ್ದಾರೆ.

