ತಿರುವನಂತಪುರಂ: ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್‍ಗಳ ದಾಖಲೆಯ ಮಾರಾಟ ವರದಿಯಾಗಿದೆ. ಈಗಾಗಲೇ 48 ಲಕ್ಷಕ್ಕೂ ಹೆಚ್ಚು ಟಿಕೆಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಟಿಕೆಟ್ ಮಾರಾಟ 47,65,650 ಆಗಿತ್ತು.
20 ಕೋಟಿ ರೂ.ಗಳ ಮೊದಲ ಬಹುಮಾನವನ್ನು ನೀಡುವ ಬಂಪರ್ ಡ್ರಾ ಜ.24 ರಂದು ನಡೆಯಲಿದೆ. ಹೆಚ್ಚಿನ ಮಾರಾಟವನ್ನು ಗಮನದಲ್ಲಿಟ್ಟುಕೊಂಡು ಐದು ಲಕ್ಷ ಟಿಕೆಟ್‍ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಲಾಟರಿ ನಿರ್ದೇಶನಾಲಯ ತಿಳಿಸಿದೆ. ಒಟ್ಟು 55 ಲಕ್ಷ ಟಿಕೆಟ್‍ಗಳನ್ನು ಮುದ್ರಿಸಲಾಗಿದೆ. ಟಿಕೆಟ್ ಬೆಲೆ 400 ರೂ.

