HEALTH TIPS

ಛತ್ತೀಸ್‌ಗಢ| ಉಕ್ಕಿನ ಸ್ಥಾವರದಲ್ಲಿ ಸ್ಫೋಟ: 6 ಕಾರ್ಮಿಕರು ಮೃತ್ಯು, ಐವರಿಗೆ ಗಾಯ

ರಾಯಪುರ: ಛತ್ತೀಸ್‌ಗಢದ ಬಲೋದ್‌ಬಝಾರ್-ಬಾಟಾಪಾರ ಜಿಲ್ಲೆಯಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಿಂದ ಕನಿಷ್ಠ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 5 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಟಾಪಾರ ಗ್ರಾಮೀಣ ಪ್ರದೇಶದ ಬಕುಲಾಹಿ ಗ್ರಾಮದಲ್ಲಿರುವ ರಿಯಲ್ ಇಸ್ಪ್ಯಾಟ್ ಆಯಂಡ್ ಪವರ್ ಲಿಮಿಟೆಡ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ದೀಪಕ್ ಸೋನಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಸ್ಥಾವರದ ಡಿಎಸ್‌ಸಿ (ದೂಳು ಸಂಗ್ರವಾಗುವ ಕೋಣೆ)ಯಲ್ಲಿ ಸ್ಫೋಟ ಸಂಭವಿಸಿತು. ಬಿಸಿ ದೂಳು ಕಾರ್ಮಿಕರ ಮೇಲೆ ಬಿದ್ದಿತು. ಇದರಿಂದ ಹಲವರಿಗೆ ಸುಟ್ಟ ಗಾಯಗಳಾದವು. 6 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು, 5 ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡರು ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹಿರಿಯ ಆಡಳಿತಾಧಿಕಾರಿಗಳು ಸ್ಥಳಕ್ಕೆ ದಾವಿಸಿದರು. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು.

ಗಾಯಗೊಂಡ 5 ಮಂದಿ ಕಾರ್ಮಿಕರನ್ನು ಬಿಲಾಸ್ಪುರದ ಛತ್ತೀಸ್‌ಗಢ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಸಿಐಎಂಎಸ್)ನಲ್ಲಿ ದಾಖಲಿಸಲಾಗಿದೆ ದೀಪಕ್ ಸೋನಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries