ಮಂಜೇಶ್ವರ: ಉದ್ಯಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರವಾಗಿರುವ ಕನ್ನಡ ಮಾಧ್ಯಮ ಎಚ್ ಎಸ್ ಟಿ ಗಣಿತ ಹುದ್ದೆಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರ ನೇಮಕಾತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಜನವರಿ 8ರಂದು ಬೆಳಗ್ಗೆ 10.30 ಕ್ಕೆ ಶಾಲೆಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ತಮ್ಮ ಎಲ್ಲಾ ಅಸಲಿ ದಾಖಲೆಗಳ ಸಹಿತ ಹಾಜರಾಗಬೇಕಾಗಿ ತಿಳಿಸಲಾಗಿದೆ. ಕೆ. ಟೆಟ್ ಅರ್ಹತಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(8921672558) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

