ಮಂಜೇಶ್ವರ: ಬಂಗ್ರಮಂಜೇಶ್ವರದ ಶಾಲೆಯಲ್ಲಿ ಮಧ್ಯಾಹ್ನದೂಟದ ಅಡುಗೆ ತಯಾರಿಸುವ ಮಧ್ಯೆ ಸ್ಟೌ ನಿಂದ ಬೆಂಕಿ ತಗುಲಿ ಗಂಭೀರ ಸುಟ್ಟು ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅಡುಗೆಯಾಳು ಮೃತಪಟ್ಟಿದ್ದಾರೆ. ಬಂಗ್ರ ಮಂಜೇಶ್ವರದ ಸರ್ಕಾರಿ ಪ್ರೌಢಶಾಲಾ ಅಡುಗೆ ಕಾರ್ಮಿಕೆ, ಉದ್ಯಾವರ ಮಾಡ ನಿವಾಸಿ ಜಯ(56) ಮೃತಪಟ್ಟವರು. ಡಿ. 16ರಂದು ಬೆಂಕಿ ತಗುಲಿ ಜಯ ಅವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಕಳೆದ 20ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು.


