ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದ ಕಾರ್ಖಾನೆಯೊಂದರ ಕಾರ್ಮಿಕ, ಒಡಿಶಾ ನಿವಾಸಿ ಸಾಮುವೆಲ್ ಟಾಪೋ(43)ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ವಾಸಿಸುತ್ತಿದ್ದ ಕೊಠಡಿಯೊಳಗೆ ಸಾಮುವೆಲ್ ಅವರನ್ನು ಅಬೋಧಾವಸ್ಥೆಯಲ್ಲಿ ಪತ್ತೆಹಚ್ಚಲಾಗಿದ್ದು, ಕಾರ್ಖಾನೆ ಮೇಲ್ವಿಚಾರಕ ಮಹಮ್ಮದ್ ಸಿದ್ದಿಕ್ ಅವರು ಕುಂಬಳೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸಾಮುವೆಲ್ ಅವರ ಅಸಹಜ ಸಾವಿನ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

