ಕುಂಬಳೆ: ಮೊಗ್ರಾಲ್ ಪೇರಾಲ್‍ನ ಅಂಗಡಿಯೊಂದಕ್ಕೆ ಹಾನಿಯೆಸಗಿ, ಅಂಗಡಿ ಮಾಲಿಕ ಹಾಗೂ ಅವರ ಸಹೋದರಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಂದೆ ಹಾಗೂ ಮಕ್ಕಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪೇರಾಲ್ ನಿವಾಸಿ ಸದಾಶಿವ, ಮಕ್ಕಳಾದ ಶ್ರವಣ್‍ರಾಜ್, ಸುದರ್ಶನ್ ಹಾಗೂ ಸಂಬಂಧಿ ಶರತ್ ಕುಮಾರ್ ಬಂಧಿತರು. ಇವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಶ್ರವಣ್‍ರಾಜ್‍ಗೆ ಜಾಮೀನು ಮಂಜೂರುಗೊಳಿಸಲಾಗಿದ್ದು, ಇತರರಿಗೆ ರಿಮಾಂಡ್ ವಿಧಿಸಲಾಗಿದೆ. ಶನಿವಾರ ಘಟನೆ ನಡೆದಿದ್ದು, ಪೇರಾಲ್ ಸಿಎಂ ಸ್ಟೋರ್ಸ್ ಮಾಲಿಕ ಅಬ್ದುಲ್ ರಹಮಾನ್ ಹಾಗೂ ಸಹೋದರ ಬಿ.ಎಂ ರಿಫಾಯಿ ಅವರ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಅಂಗಡಿಗೆ ಆಗಮಿಸಿದ ತಂಡ ಕ್ಷುಲ್ಲಕ ಕಾರಣಕ್ಕೆ ಹಲ್ಲೆಗೈದು ಬೆದರಿಕೆಯೊಡ್ಡಿರುವುದಲ್ಲದೆ, ದಾಂಧಲೆ ನಡೆಸಿದ ಪರಿಣಾಮ 25ಸಾವಿರಕ್ಕೂ ಹೆಚ್ಚು ಮೊತ್ತದ ನಷ್ಟ ಉಂಟಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


