ಕಾಸರಗೋಡು: ಸನಾತನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವಿದ್ಯಾಲಯಗಳ ಪೋಷಣೆಗೆ ಪಾಲಕರೂ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದು ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ತಿಳಿಸಿದ್ದಾರೆ.
ಅವರು ಕೂಡ್ಲು ಪಾಯಿಚ್ಚಾಲ್ ಚೈತನ್ಯ ಶಿಶು ವಿಹಾರ ಮತ್ತು ಚೈತನ್ಯ ವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಇಂದಿನ ಆಧುನಿಕ ಯುಗದಲ್ಲಿ ಹಿಂದೂ ಸಮಾಜ ಸಂದಿಗ್ಧತೆಯನ್ನು ಎದುರಿಸುತ್ತಿದ್ದು, ಸನಾತನ ಸಂಸ್ಕøತಿಯ ಪೋಷಣೆಯಿಂದ ಇಂತಹ ಸವಾಲುಗಳಿಂದ ಪರಾಗಲು ಸಾಧ್ಯ ಎಂದುತಿಳಿಸಿದರು.
ಚೈತನ್ಯ ಟ್ರಸ್ಟ್ ಅಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಪ್ರಬಂಧಕ ಬಿ. ನಾಗೇಶ್, ಪ್ರಾಂಶುಪಾಲೆ ಎಸ್.ಎಂ ಪುಷ್ಪಲತಾ ಉಪಸ್ಥಿತರಿದ್ದರು. ಈ ಸಂದರ್ಭ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮಹಾಬಲೇಶ್ವರ ಭಟ್ ಎಡಕ್ಕಾನ ಅವರನ್ನು ವಿವಿಕ್ತಾನಂದ ಸರಸ್ವತೀ ಶಾಲುಹೊದಿಸಿ ಸನ್ಮಾನಿಸಿದರು. ಸಂಸ್ಥೆ ವ್ಯವಸ್ಥಾಪಕ ಕೆ ರಮೇಶ್ ಸನ್ಮಾನಪತ್ರ ವಾಚಿಸಿದರು.
2025ರ ಸಿಬಿಎಸ್‍ಸಿ ಹತ್ತನೇ ತರಗತಿಯಲ್ಲಿಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳು, ಚಿನ್ಮಯಾ ಮಿಷನ್ ನಡೆಸಿದ ಗೀತಾಪಾರಾಯಣಕ್ಕೆ ಅಖಿಲಭಾರತ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನೂ ಸ್ವಾಮೀಜಿ ಅಭಿನಂದಿಸಿದರು. ಬಿ.ಕೆ ಬೇಬಿ ಸ್ವಾಗತಿಸಿದರು. ಕೆ. ಪ್ರಿಯಾ ವಂದಿಸಿದರು.


