ಕಾಸರಗೋಡು: ಗಣರಾಜ್ಯೋತ್ಸವ ಸಮಾರಂಭಕ್ಕೆ ಸಿದ್ಧತೆ ಪೂರ್ತಿಗೊಂಡಿದ್ದು, ಪೊಲೀಸರಿಂದ ಬಿಗು ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾಸರಗೋಡು ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಬೆಳಗ್ಗೆ 9ಕ್ಕೆ ರಾಜ್ಯ ಅರಣ್ಯ ಖಾತೆ ಸಚಿವ ಎ.ಕೆ ಶಶೀಂದ್ರನ್ ಧ್ವಜಾರೋಹಣ ನಡೆಸುವರು.
ಪಥಸಂಚಲನದಲ್ಲಿ ಭಾಗವಹಿಸಲಿರುವ ವಿವಿಧ ದಳಗಳ ಪೂರ್ವಭಾವಿ ಕವಾಯತು ನಗರಸಭಾ ಕ್ರೀಡಾಂಗಣದಲ್ಲಿ ನಡೆಯಿತು. ಎ.ಆರ್ ಕ್ಯಾಂಪ್ ಅಸಿಸ್ಟೆಂಟ್ ಕಮಾಂಡೆಂಟ್ ಪಥಸಂಚಲನದ ನೇತೃತ್ವ ವಹಿಸುವರು. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನದಟ್ಟಣೆಯಿರುವ ಬಸ್‍ನಿಲ್ದಾಣ,ಮಾರುಕಟ್ಟೆ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶ್ವಾನದಳ, ಬಾಂಬು ಸ್ಕ್ವೇಡ್‍ಗಳ ಮೂಲಕ ಪೊಲೀಸರು ವಾಹನಗಳ ತಪಾಸಣೆ ಕೈಗೊಳ್ಳುತ್ತಿದ್ದಾರೆ.


