ಕಾಸರಗೋಡು: ಜಿಲ್ಲಾ ತಲೆಹೊರೆ ಕಾರ್ಮಿಕರ ಜನರಲ್ ಮಜ್ದೂರ್ ಸಂಘ(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಕಲ್ಯಾಣ ನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಲ್ಯಾಣ ನಿಧಿ ಕಚೇರಿಯ ಕಾರ್ಯಕ್ಷಮತೆ ಹೆಚ್ಚು ಪರಿಣಾಮಕಾರಿಯಾಗಿಸಬೇಕು, ಉದ್ಯೋಗ ಮತ್ತು ವೇತನದ ಸಂರಕ್ಷಣೆ ನೀಡಬೇಕು, ಕಾರ್ಮಿಕರ ಕ್ಷೇಮ ನಿಧಿಯ ಹಣ ವರ್ಗಾವಣೆಯಿಂದಾಗಿ ಕಾರ್ಮಿಕರಿಗೆ ಸಕಾಲದಲ್ಲಿ ಸಿಗಬೇಕಾದ ಸವಲತ್ತು ಲಭ್ಯವಾಗಿಸಬೇಕು, ಯೋಜನಾ ಪ್ರದೇಶದಲ್ಲಿ ಕಾರ್ಮಿಕ ಕಾರ್ಡ್ ಪೂರೈಸದೆ ಕಾಪೆರ್Çರೇಟ್‍ಗಳಿಗೆ ಸಹಾಯ ಮಾಡುವ ಮಂಡಳಿ ಅಧಿಕಾರಿಗಳ ಕ್ರಮ ಕೈಬಿಡಬೇಕುಎಂಬ ಬೇಡಿಕೆ ಮುಂದಿರಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಧರಣಿ ಉದ್ಘಾಟಿಸಿದರು. ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಪೆÇಯಿನಾಚಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ.ಎಸ್ ಜಿಲ್ಲಾ ಪದಾಧಿಕಾರಿಗಳಾದ ಹರೀಶ್ ಕುದ್ರೆಪ್ಪಾಡಿ, ಪ್ರದೀಪ್ ಕೇಲೋಟ್, ಲೀಲಾಕೃಷ್ಣನ್, ಗುರುದಾಸ್ ಚೇನಕ್ಕೋಡ್ ಉಪಸ್ಥಿತರಿದ್ದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಬ್ರಾಣ ಸ್ವಾಗತಿಸಿದರು. ರವಿ ವೈ.ಎಸ್ ವಂದಿಸಿದರು. ಜಿಲ್ಲಾ ಕಚೇರಿ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿ.ಎಂ.ಎಸ್ ಜಿಲ್ಲಾ ಪದಾಧಿಕಾರಿಗಳಾದ ಭಾಸ್ಕರನ್ ಚೆಂಬಿಲೋಟ್, ಬಾಬುಮೋನ್ ಚೆಂಗಳ, ಶ್ರೀಧರನ್ ಚೆನಕೋಡ್, ಉಮೇಶ್ ಮಾನ್ಯ, ತಂಕಚ್ಚನ್ ಪಾಣತ್ತೂರು, ದಿಲೀಪ್ ಡಿಸೋಜಾ, ಕುಞÂಕೃಷ್ಣನ್ ಮಾವುಂಗಾಲ್, ರಂಜಿತ್ ಚೆರ್ಕಳ, ಸತೀಶ್ ಮಧೂರು ನೇತೃತ್ವ ವಹಿಸಿದ್ದರು.


