ಮಂಜೇಶ್ವರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮ ಶತಾಬ್ದಿಯ ಅಂಗವಾಗಿ ಫೆಬ್ರವರಿ 22 ರಂದು ಜರಗುವ ಮೀಂಜ ಪಂಚಾಯತಿ ಮಟ್ಟದ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಟ್ಟತ್ತೂರು ಬಳ್ಳಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದ ನಾರಾಯಣ ಭಗವತಿ ಪೂಜಾರ್ಚನ್ ಅವರು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿಯ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಮಂಜೇಶ್ವರ ತಾಲೂಕು ಸಂಘ ಚಾಲಕ್ ಸದಾಶಿವ ಭಟ್ ತಲೆಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜೋತ್ಸವ ಸಮಿತಿ ಪಂಚಾಯತಿ ಮಟ್ಟದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಸಮಿತಿ ಸಂಚಾಲಕÀ ಹರೀಶ್ ಮೀಯಪದವು ಸ್ವಾಗತಿಸಿ, ಕೋಶಾಧಿಕಾರಿ ಮನೀಶ್ ಸಂತಡ್ಕ ವಂದಿಸಿದರು.

.jpg)
