ಕಾಸರಗೋಡು: ವರ್ಕಾಡಿ ಪಂಚಾಯಿತಿ ಮಜೀರ್‍ಪಳ್ಳ-ಬೊಟ್ಟೋಡಿ-ಕೂಟತ್ತಜೆ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.29 ರಿಂದ ಮಾರ್ಚ್ 2 ರವರೆಗೆ ವಾಹನ ಸಂಚಾರ ನಿಷೇಧಿಸಲಾಗುವುದು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೃಷಿ ವಿಜ್ಞಾನ ಕೇಂದ್ರ ರಸ್ತೆಯ ಮೂಲಕ ಧರ್ಮ ನಗರಕಟ್ಟೆ ರಸ್ತೆಮೂಲಕ, ಬಲಿಪನ ಗುಳಿಯಿಂದ ಧರ್ಮನಗರ ದರ್ಗಾ ರಸ್ತೆಮೂಲಕ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

