ನವದೆಹಲಿ: ಅಲಪ್ಪುಳದ ಪರಿಸರ ಹೋರಾಟಗಾರ್ತಿ ಕೊಲ್ಲಕಲ್‍ನ ದೇವಕಿ ಅಮ್ಮ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪರಿಸರ ಕ್ಷೇತ್ರಕ್ಕೆ ಅವರ ಸಮಗ್ರ ಕೊಡುಗೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ದೇವಕಿ ಅಮ್ಮ ಭಾರತದ ನಾರಿ ಶಕ್ತಿ ಪ್ರಶಸ್ತಿ ವಿಜೇತೆ.
ಆಲಪ್ಪುಳ ಜಿಲ್ಲೆಯ ಕಾರ್ತಿಕಪಲ್ಲಿ ತಾಲೂಕಿನ ಮುತ್ತುಕುಳಂನಲ್ಲಿ ಐದು ಎಕರೆಯಲ್ಲಿ ಅರಣ್ಯವನ್ನು ಸೃಷ್ಟಿಸಿರುವ ದೇವಕಿ ಅಮ್ಮ, ಕಾಡಿನಲ್ಲಿ 3000 ಕ್ಕೂ ಹೆಚ್ಚು ಔಷಧೀಯ ಸಸ್ಯಗಳು ಮತ್ತು ದೊಡ್ಡ ಮರಗಳನ್ನು ನೋಡಿಕೊಳ್ಳುತ್ತಾರೆ.

