ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಸ್ಥಾಯಿ ಸಮಿತಿ ಸದಸ್ಯರಿಗೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೀಗ್ ಸದಸ್ಯೆ ಹಾಗೂ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಮತ ನೀಡಿರುವುದನ್ನು ಪ್ರತಿಭಟಿಸಿ ಸಿಪಿಎಂ ಪೈವಳಿಕೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ವಾಹನ ಜಾಥಾ ನಡೆಸಲಾಯಿತು. ಕಯ್ಯಾರ್‍ನಲ್ಲಿ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಜಾಥಾ ಉದ್ಘಾಟಿಸಿ ಮಾತನಾಡಿದರು. ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಾಥಾ ಲೀಡರ್ ಅಬ್ದುಲ್ ರಜಾಕ್ ಚಿಪ್ಪಾರು, ಜಾಥಾ ನಾಯಕ ಪುರುಷೋತ್ತಮ ಬಳ್ಳೂರು, ಸದಸ್ಯ ಚಂದ್ರ ನಾಯ್ಕ್ ಮಾನಿಪ್ಪಾಡಿ, ವಾರ್ಡ್ ಪ್ರತಿನಿಧಿ ಹಾರಿಸ್ ಪೈವಳಿಕೆ, ಜಖಾರಿಯ, ವಿನಯ ಕುಮಾರ್ ಭಾಗವಹಿಸಿದರು. ವಿವಿಧ ಕೇಂದ್ರಗಳ ಮೂಲಕ ಸಂಚರಿಸಿ ಸಂಜೆ 5 ಗಂಟೆಗೆ ಪೆರ್ಮುದೆಯಲ್ಲಿ ಜಾಥಾ ಸಮಾಪ್ತಿಗೊಂಡಿತು. ಪೆರ್ಮುದೆಯಲ್ಲಿ ನಡೆದ ಸಮಾರೋಪದಲ್ಲಿ ರಾಮಣ್ಣ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು.

.jpg)
