ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಸಹಕಾರಿ ಸೇವಾ ಪಿಂಚಣಿದಾರರ ಸಂಘಟನೆ ವತಿಯಿಂದ ಜ. 29ರಂದು ಮಂಜೇಶ್ವರದ ಹೊಸಂಗಡಿಯಿಂದ ಉತ್ತರ ವಲಯ ಜಾಥಾ ಆರಂಭಗೊಳ್ಳಲಿದೆ. ಸ್ಥಗಿತಗೊಳಿಸಲಾಗಿರುವ ಕ್ಷಾಮಭತ್ತೆ ಪುನಃಸ್ಥಾಪಿಸುವುದು, ಪಿಂಚಣಿ ಸುಧಾರಣೆಗಳನ್ನು ಜಾರಿಗೆ ತರುವುದು, ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮೊತ್ತದ ಹೆಚ್ಚಳ, ವೈದ್ಯಕೀಯ ಭತ್ಯೆ ಹೆಚ್ಚಳಗೊಳಿಸುವುದು ಮುಂತಾದ ಬೇಡಿಕೆ ಮುಂದಿರಿಸಿ ಜಾಥಾ ನಡೆಯಲಿದೆ. ನಂತರ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಸರಣಿ ಸತ್ಯಾಗ್ರಹ, ನಿರಾಹಾರ ಸತ್ಯಾಗ್ರಹದ ಯಶಸ್ಸಿಗಾಗಿ ಮಂಜೇಶ್ವರ ಹೊಸಂಗಡಿಯಲ್ಲಿ ಸ್ವಾಗತಸಮಿತಿ ರಚನಾ ಸಮಾವೇಶ ನಡೆಯಿತು.
ಸಮಾವೇಶವನ್ನು ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ವಿ ಮುಕುಂದನ್ ಉದ್ಘಾಟಿಸಿದರು. ಜಿಲ್ಲಾಕಾರ್ಯದರ್ಶಿ ಎಂ. ವಿಜಯನ್, ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ, ಕಾರ್ಯದರ್ಶಿ ಎಸ್. ರಾಮಚಂದ್ರನ್ ಉಪಸ್ಥಿತರಿದ್ದರು. ಪ್ರಚಾರ ಮೆರವಣಿಗೆ ಮತ್ತು ಇತರ ಕಾರ್ಯಕ್ರಮಗಳುಇದನ್ನು ಯಶಸ್ವಿಗೊಳಿಸಲು, ಕೆ.ಆರ್. ಜಯನಂದನ್ ಅಧ್ಯಕ್ಷರಾಗಿ ಮತ್ತು ಕೃಷ್ಣನ್ ಅಡ್ಕತ್ತೊಟ್ಟಿ ಸಂಚಾಲಕರಾಗಿರುವ 51ಮಂದಿ ಸದಸ್ಯರನ್ನೊಳಗೊಂಡ ಸ್ವಾಗತಸಮಿತಿ ರಚಿಸಲಾಯಿತು.


