ಮಧೂರು: ಸಿರಿಬಾಗಿಲು ವಾರ್ಡಿನಿಂದ ಮಧೂರು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಸಿರಿಬಾಗಿಲು ಕಜೆ ಮನೆತನದ ನವನೀತ ರೈ ಅವರನ್ನು ಬಂಟರ ಸಂಘದ ಮಧೂರು ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಕುತ್ತಾರು ಗುತ್ತು ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ಸಂಘದ ಹಿರಿಯ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ರಾಮ ಶೆಟ್ಟಿ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡ್, ಮಧೂರು ಬಂಟರ ಸಂಘದ
ಅಧ್ಯಕ್ಷ ರಾಮಕೃಷ್ಣ ಆಳ್ವ, ಮಹಿಳಾ ಸಮಿತಿ ಪದಾಧಿಕಾರಿಗಲಾದ ನಾಟಿ ವೈದ್ಯೆ ಯಮುನಾ ಶೆಟ್ಟಿ, ಶ್ಯಾಮಲಾ ಎಂ ಶೆಟ್ಟಿ,ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ, ಉಮೇಶ್ ಶೆಟ್ಟಿ ಸೂರ್ಲು, ಬಾಬು ರೈ ಕಣ್ಣಿಗುಡ್ಡೆ, ಸಂತೋಷ್ ರೈ ಗಂಗೆ, ಜಯಲಕ್ಷ್ಮಿ ಅಡಪ ಉಪಸ್ಥಿತರಿದ್ದರು.
ಈ ಸಂದರ್ಭ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರೀಡಾಳುಗಳಾದ ಯಜ್ಞ ಶೆಟ್ಟಿ, ಕೃತಿಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನವನೀತ ರೈ ಮಧೂರು ಸನ್ಮಾನಿತರ ಪರವಾಗಿ ಮಾತನಾಡಿದರು. ರೋಹಿತಾಕ್ಷಿ ಟೀಚರ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ರೈ ನಾಯಕ್ಕೊಡು ವಂದಿಸಿದರು.


