ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಎದುರುಭಾಗದಲ್ಲಿರುವ ಕಾಣಿಕೆ ಹುಮಡಿ ಬೀಗ ಒಡೆದು ಇದರಿಂದ ಹಣ ಕಳವುಗೈಯಲಾಗಿದೆ. ಎರಡು ದಿವಸದ ಹಿಂದೆ ಹುಂಡಿಯ ಹಣ ತೆಗೆಯಲು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತೆರಳಿದಾಗ ಬೀಗ ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ಕ್ಷೇತ್ರ ಸಮಿತಿಯವರು ನೀಡಿದ ದೂರಿನನ್ವಯ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಸನಿಹದ ಸಿಸಿ ಕ್ಯಾಮರಾ ದ್ಶಶ್ಯಾವಳಿ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ.

