ಕುಂಬಳೆ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಸಿಪಿಐಎಂ ನೇತಾರ, ಇಚ್ಲಂಪಾಡಿ ಕಳತ್ತೂರು ಶಾಲೆಯ ಶಿಕ್ಷಕ ಸುಧಾಕರ್ ಅವನನ್ನು ಶಾಲೆಯಿಂದ ವಜಾಗೊಳಿಸಬೇಕು ಮತ್ತು ಮುಂದೆ ಶಾಲೆಯಲ್ಲಿ ಮುಂದುವರಿದರೆ ಬಿಜೆಪಿಯಿಂದ ಶಾಲೆಗೆ ಘೇರಾವ್ ನಡೆಸಲಾಗುವುದು ಎಂದು ತಿಳಿಸಿ ಶಾಲೆಯ ಅಧಿಕೃತರಿಗೆ ಬಿಜೆಪಿ ಕುಂಬಳೆ ಉತ್ತರ ವಲಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಬಿಜೆಪಿ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ಬಿಜೆಪಿ ನಾಯಕ ವಿಕ್ರಂ ಪೈ ಉಪಸ್ಥಿತರಿದ್ದರು. ಶೀಘ್ರ ಅಧ್ಯಾಪಕನ ವಿರುದ್ಧ ಶಾಲಾ ಅಧಿಕೃತರು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಧರಣಿ,ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.


