ಕುಂಬಳೆ: ಪ್ರವಾಸಿಗರ ತಾಣ ಪೊಸಡಿಗುಂಪೆ ತಪ್ಪಲಲ್ಲಿನ ಹಿತ್ತಿಲಿಗೆ ಬೆಂಕಿ ತಗುಲಿ ಹಾನಿ ಸಂಭವಿಸಿದೆ. ಹುಲ್ಲುಗಾವಲಿಗೆ ತಗುಲಿದ ಬೆಂಕಿ ವ್ಯಾಪಿಸುತ್ತಿದ್ದಂತೆ, ಸ್ಥಳೀಯರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಶಮನಗೊಳಿಸಿದ್ದಾರೆ.
ಪ್ರತಿದಿನ ಹಲವು ಮಂದಿ ಪ್ರವಾಸಿಗರುಈಸುಂದರ ತಾಣಕ್ಕೆ ಆಗಮಿಸುತ್ತಿದ್ದು, ಯಾರೋ ಸಿಗರೇಟ್ ಸೇದಿ ಎಸೆದ ಪರಿಣಾಮ ಬೆಂಕಿ ತಗುಲಿರಬೇಕೆಂದು ಸಂಶಯಿಸಲಾಗಿದೆ.

