ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಮುಸೋಡಿಯಲ್ಲಿ ಮಾದಕದ್ರವ್ಯ ವ್ಯಾಪಾರಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮೂಸೋಡಿ ನಿವಾಸಿ ಮಜೀದ್ ಪರಾರಿಯಾದ ಈತ ಸಂಚಾರಕ್ಕೆ ಬಳಸಿಕೊಂಡಿದ್ದ ಸ್ಕೂಟರನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಇದರಿಂದ 1.32ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ 'ಡಾನ್ಸಾಪ್'ತಂಡ ಆರೋಪಿ ಪತ್ತೆಗಾಗಿ ಮುಸೋಡಿಗೆ ತೆರಳಿದ್ದ ಸಂದರ್ಭ ಸ್ಕುಟರಲ್ಲಿ ಸಂಚರಿಸುತ್ತಿದ್ದ ಈತನನ್ನು ತಡೆದು ವಿಚಾರಣೆ ನಡೆಸುವ ಮಧ್ಯೆ ಈತಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭ ಸನಿಹದ ಮನೆಯಿಂದ ಆಗಮಿಸಿದ ಆರೋಪಿ ತಂದೆ, ಪೊಲೀಸರ ವಶದಲ್ಲಿದ್ದ ಮಜೀದ್‍ನನ್ನು ಬಿಡಿಸಿದ್ದು, ಈ ಸಂದರ್ಭ ಆರೋಪಿ ಓಡಿ ಪರಾರಿಯಾಗಿದ್ದಾನೆ. ಆರೋಪಿಗೆಪರಾರಿಯಾಗಲು ಸಹಯ ಒದಗಿಸಿದ ತಂದೆ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

