ಉಪ್ಪಳ: ಸತತ ಅಧ್ಯಯನ ಹಾಗೂ ಅಭ್ಯಾಸದಿಂದ ಮಾತ್ರ ಯಕ್ಷಗಾನ ಕಲಾವಿದ ರೂಪುಗೊಳ್ಳಲು ಸಾಧ್ಯ, ಹಿರಿಯ ಕಲಾವಿದರ ಅನುಭವ ಮಾರ್ಗದರ್ಶನವನ್ನು ಯಕ್ಷಗಾನ ಕಲಿಕಾ ಸಕ್ತರು ಮೈಗೂಡಿಸಿ ಕೊಳ್ಳಬೇಕು. ಮನೆಮನೆಗಳಲ್ಲಿ ಸಣ್ಣದಾದರೂ ಪುಸ್ತಕ ಭಂಡಾರವಿರಬೇಕು. ಪ್ರಸಂಗ ಪುಸ್ತಕಗಳ ಹಾಗೂ ಪುರಾಣಕತೆಗಳ ಓದು ಕಲಾವಿದರಿಗೆ ಅನಿವಾರ್ಯ ಎಂದು ನಿಕಟಪೂರ್ವ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಹೇಳಿದರು.
ಶ್ರೀಗೌರೀ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಕಲಾ ಸಂಸ್ಥೆಯು ಖರೀದಿಸಿದ ನೂತನ ಚೆಂಡೆ, ಮದ್ದಳೆ ಸಮರ್ಪಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಸಂಸ್ಕøತಿಯ ಭಾಗವಾದ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೈಂಕರ್ಯದಲ್ಲಿ ಯಕ್ಷಗಾನ ತಂಡಗಳ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಅಧ್ಯಯನ ಕೇಂದ್ರದ ಗುರುಗಳಾದ ರಾಮ ಸಾಲ್ಯಾನ್ ಮಂಗಲ್ಪಾಡಿ ಗೌರವ ಉಪಸ್ಥಿತರಿದ್ದರು. ಸುರೇಶ ಶೆಟ್ಟಿ ಪ್ರತಾಪನಗರ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿರಾದ ಪರಪು ನಾರಾಯಣ ಶೆಟ್ಟಿ, ಚಟ್ಲ ಸಂಜೀವ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ವಲ್ಸರಾಜ್ ಕೆ.ಪಿ., ನಾರಾಯಣ ಮಣಿಯಾಣಿ, ಗಣೇಶ್ ಸುಧಾ, ದುಗ್ಗಪ್ಪ ಶೆಟ್ಟಿ ತಿಂಬರ ಮಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಿರಿರಾಜ ಮಾಸ್ತರ್ ಪ್ರತಾಪನಗರ ಸ್ವಾಗತಿಸಿ, ಉಷಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಯಕ್ಷಗಾನ ಆಧ್ಯಯನ ಕೇಂದ್ರ ವಿದ್ಯಾರ್ಥಿಗಳಿಗೆ ಯಕ್ಷಗಾನ ರಸಪ್ರಶ್ನೆ, ಯಕ್ಷ ಕುಣಿತ ಸ್ಪರ್ಧೆ, ಏರ್ಪಡಿಸಲಾಯಿತು. ವಿದ್ಯಾರ್ಥಿ ಪೋಷಕರಿಗೆ ರಸಪ್ರಶ್ನೆ ಹಾಗೂ ಯಕ್ಷಗಾನ ಆಧ್ಯಯನ ಕೇಂದ್ರದ ಭಾಗವತಿಕೆ ವಿದ್ಯಾರ್ಥಿಗಳಿಂದ ಯಕ್ಷಗಾನ ವೈಭವ ಜರಗಿತು.

.jpg)
.jpg)
