ಕಾಸರಗೋಡು: ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಮಂಗಳೂರು ವತಿಯಿಂದ ಸರ್ವ ಬಿಲ್ಲವರ ಸಹಕಾರದೊಂದಿಗೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಾಗತಿಕ ಬಿಲ್ಲವರ ಕ್ರೀಡೋತ್ಸವದಲ್ಲಿ ಕಾಸರಗೋಡಿನ ಕರಂದಕ್ಕಾಡು ಬಿಲ್ಲವ ಸೇವಾ ಸಂಘ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಕಾಸರಗೋಡು ಸಣ್ಣಕೂಡ್ಲುವಿನ ಶೈಲೇಶ್ ನೇತೃತ್ವದ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದೆ. ತಂಡದಲ್ಲಿ ವಿನೋದ್ ಕುಮಾರ್ ಪಿ, ಮಹೇಶ್ ಕುಮಾರ್, ಮಹೇಶ್ ಸಿ ಎಚ್, ಅಜಿತ್ ಕುಮಾರ್ ಪಿ, ವೀರೇಶ್ ಕುಮಾರ್, ದಿವಿನ್ ಕುಮಾರ್, ಸಂದೀಪ್ ಕುಮಾರ್, ಅಂಕೆಶ್ ಆರ್ ಪಾಲ್ಗೊಂಡಿದ್ದರು.
ಕ್ರೀಡೋತ್ಸವದಲ್ಲಿ ಪುರುಷರಿಗಾಗಿ ವಾಲಿಬಾಲ್ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗದ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾವಳಿಗಳನ್ನು ಆಯೋಜಿಸಲಾಗಿತ್ತು.


