ಮಂಜೇಶ್ವರ: ಮಂಜೇಶ್ವರದ ಹೆದ್ದಾರಿ ನಿಯಂತ್ರಣ ಕೇಂದ್ರ ಸನಿಹದ ರೈಲ್ವೆ ಹಳಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ರೈಲು ಡಿಕ್ಕಿಯಾಘಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. 65ವರ್ಷ ಪ್ರಾಯ ಅಂದಾಜಿಸಲಾಗಿದ್ದು, ಮೃತದೇಹದ ಮೇಲೆ ಲುಂಗಿ ಮತ್ತು ಅಂಗಿ ಪತ್ತೆಯಾಗಿದೆ. ಮೃತದೇಹ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

