ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರ್ ಕೊರಗಜ್ಜ ಕಟ್ಟೆ ಸಮೀಪ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ವಿಕೇಶ್, ಮಜಿಬೈಲ್ ನಿವಾಸಿ ಸುರೇಶ್, ಉಳ್ಳಾಲ ನಿವಾಸಿ ಯಾದವ ಹಾಗೂ ಮಂಗಳೂರು ನಿವಾಸಿ ಮಹಾಬಲ ಬಂಧಿತರು. ಇವರಿಂದ ಜೂಜಿಗೆ ಬಳಸಿದ್ದರೆನ್ನಲಾದ 10600ರೂ. ನಗದು ಹಾಗೂ ಒಂದು ಅಂಕದ ಕೋಳಿಯನ್ನು ವಶಪಡಿಸಿಕೊಂಡಿದ್ದಾರೆ. ಉಳಿದವರು ಓಡಿ ಪರಾರಿಯಾಗಿದ್ದಾರೆ. ಮಂಜೇಶ್ವರ ಠಾಣೆ ಎಸ್.ಐ ವೈಷ್ಣವ್ ರಾಮಚಂದ್ರ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

