ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಟೋಲ್ ಪ್ಲಾಜಾ ಮುಚ್ಚುಗಡೆಗೊಳಿಸುವವರೆಗೆ ಚಳವಳಿ ಮುಂದುವರಿಸಲು ಕ್ರಿಯಾಸಮಿತಿ ನಿರ್ಧರಿಸಿದೆ. ಇದರಂತೆ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಹಾಗೂ ಒಕ್ಕೂಟಗಳನ್ನು ಸೇರಿಸಿಕೊಂಡು ಟೋಲ್ ಪ್ಲಾಜಾಕ್ಕೆ ಮಹಿಳಾ ಮಾರ್ಚ್ ನಡೆಸಲಾಗುವುದು. ಜೊತೆಗೆ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಕ್ರಿಯಾ ಸಮಿತಿ ಸಭೆ ನಿರ್ಧರಿಸಿದೆ.
ವಿ.ಪಿ. ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿ.ಎ. ಸುಬೈರ್, ಅಶ್ರಫ್ ಕಾರ್ಳೆ, ಅಸೀಸ್ ಕಳತ್ತೂರು, ಎ.ಕೆ. ಆರಿಫ್, ಲಕ್ಷ್ಮಣ ಪ್ರಭು, ತಾಜುದ್ದೀನ್ ಮೊಗ್ರಾಲ್, ಅಬ್ದುಲ್ ಲತೀಫ್ ಕುಂಬಳೆ, ಬಿ. ಮುಹಮ್ಮದಲಿ, ಫಾರೂಕ್ ಶಿರಿಯ, ಕೆ.ವಿ. ಯೂಸುಫ್, ಸತ್ತಾರ್ ಆರಿಕ್ಕಾಡಿ, ಮುಹಮ್ಮದ್ ಕುಂಞÂ ಮೊದಲಾದವರು ಭಾಗವಹಿಸಿದ್ದರು.

